ಜಿಲ್ಲೆ

ಉತ್ತಮ ಜೀವನಕ್ಕೆ ಸತ್ಸಂಗ ಅವಶ್ಯ

ಇಟಗಿ: ಮಹಾತ್ಮರ ಸಂದೇಶ ಅರಿತು ಜೀವನ ಸಾಗಿಸಲು ಸತ್ಸಂಗ ಅವಶ್ಯ ಎಂದು ನಿವತ್ತ ಮುಖ್ಯಶಿಕ್ಷಕ ಶಂಕರ ದಂಡಿನ ಹೇಳಿದರು.

ಸಮೀಪದ ಮೂಕಬಸವ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 32ನೇ ಬೆಳದಿಂಗಳ ಅನುಭಾವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಆಧುನಿಕ ಜಗತ್ತಿಗೆ ಹೊಸತನ ನೀಡಿದ್ದರೂ ಉತ್ತಮ ಸಂಸ್ಕಾರ ಮತ್ತು ಸಂಸತಿ ಬೆಳವಣಿಗೆಗೆ ಆಧ್ಯಾತ್ಮಿಕ ಕಾರ್ಯಕ್ರಮ ಅವಶ್ಯ ಎಂದರು.

ಯುವ ಧುರೀಣ ಮಂಜುನಾಥ ಕೋಲ್ಕಾರ ಮಾತನಾಡಿ, ಮೂಕಬಸವ ನಗರದ ರೆತರು ನಿರಂತರವಾಗಿ ಅನುಭಾವ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಯೋಜಿಸಿದ್ದು ಸಾರ್ಥಕ ಸೇವೆಯಾಗಿದೆ. ಪೂಜ್ಯರು, ಸಾಹಿತಿ ಮತ್ತು ಸಾಧಕರನ್ನು ಕರೆಸಿ ಸನ್ಮಾನಿಸಿ ಯುವಜನರಿಗೆ ಸ್ಫೂರ್ತಿ ತುಂಬುತ್ತಿರುವುದು ಮಾದರಿಯಾಗಿದೆ ಎಂದರು.

ಆಧ್ಯಾತ್ಮಿಕ ಚಿಂತಕ ಮಂಜು ಅಂಕಲಗಿ ಮಾತನಾಡಿದರು. ಶಿಕಿ ವಿ.ಎಸ್​. ಸಾಗರ, ಶಂಕರ ಪತ್ತಾರ, ವಾಸುದೇವ ಬಾಗೇವಾಡಿ, ಮಾರುತಿ ಕಾರ್ಕದ, ರಾಹುಲ ದೇವನಪ್ಪಗೊಳ, ಅನಂದ ಬೆಣ್ಣಿ, ಯಲ್ಲಪ್ಪ ಮಡಿವಾಳರ, ಮಾರುತಿ ಸಾತಪ್ಪನವರ, ಗೋಪಾಲ ಹಂಚಿನಮನಿ, ಭೀಮಸೇನ ಹೊಂಗಲ, ಶರ್​ೀ ಗಡಾದ, ಮಿನಾಜ್​ ತಿಗಡಿ ಹಾಗೂ ಇತರರು ಇದ್ದರು.