ಜಿಲ್ಲೆ

ಬಾಳ್ಕುದ್ರುವಿನಲ್ಲಿ ಫೂಟ್‌ಪಲ್ಸ್ ಉಚಿತ ಥೆರಪಿ

ಇಂದಿರಾ ಎನ್ ಕೆ

ಕೋಟ: ಬಾಳ್ಕುದ್ರು ಮಹಿಳಾ ಮಂಡಳಿ ಮತ್ತು ಸರ್ವೋದಯ ಯುವಕ ಮಂಡಲ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸಹಯೋಗದಲ್ಲಿ ಫೂಟ್‌ಪಲ್ಸ್ ಉಚಿತ ಥೆರಪಿ ಕಾರ್ಯಕ್ರಮ ಇತ್ತೀಚೆಗೆ ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು.

ಕುಂದಾಪುರ ಫೂಟ್‌ಫಲ್ಸ್ ಥೆರಪಿಯ ಜಿಲ್ಲಾ ಮುಖ್ಯಸ್ಥ ನರೇಂದ್ರ ಕುಂದಾಪುರ ಫೂಟ್ ಫಲ್ಸ್ ಥೆರಪಿಯ ಕುರಿತು ಸಮಗ್ರ ಮಾಹಿತಿ ನೀಡಿದರು. ಫೂಟ್ ಫಲ್ಸ್ ಥೆರಪಿಯ ಉಮೇಶ್ ಬಂಗೇರ, ಮಹಿಳಾ ಮಂಡಳಿ ಅಧ್ಯಕ್ಷೆ ರೇಖಾ ಸುವರ್ಣ, ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ವಿಜಯ ಪೂಜಾರಿ , ಸರ್ವೋದಯ ಯುವಕ ಮಂಡಲದ ಅಧಕ್ಷ ವಿಜೇತ್ ದೇವಾಡಿಗ, ಸದಸ್ಯರು ಇದ್ದರು. ಹತ್ತು ದಿನ ಶಿಬಿರ ನಡೆಯಲಿದೆ.