ನೂಜಿಬಾಳ್ತಿಲದಲ್ಲಿ ಮುಳುಗಡೆಗೊಂಡಿರುವ ಕಾಲುಸಂಕ. 
ಜಿಲ್ಲೆ

ನೂಜಿಬಾಳ್ತಿಲದಲ್ಲಿ ಕಾಲುಸಂಕಕ್ಕೆ ಹಾನಿ

ಸೌಮ್ಯ ಆರ್

ಡಬ: ಭಾರಿ ಮಳೆಗೆ ಕಾಲುಸಂಕಕ್ಕೆ ಹಾನಿಯುಂಟಾಗಿ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಾಳೆಮಾರು ಎಂಬಲ್ಲಿ ಸಂಪರ್ಕ ಕಡಿತವಾಗಿದೆ. ಬಾಳೆಮಾರು-ಕೂರ್ನೂಜಿ ಸಂಪರ್ಕ ರಸ್ತೆಯಲ್ಲಿ ಸಂಕ ಮುಳುಗಡೆಗೊಂಡು ಸಂಪರ್ಕ ಕಡಿತಗೊಂಡು ಸುಮಾರು 10ಕ್ಕೂ ಅಧಿಕ ಮನೆಗಳಿಗೆ ದಿಗ್ಭಂಧನ ಉಂಟಾಯಿತು. ಸಂಕ ಮುಳುಗಡೆಯಾಗಿ ಶಾಲಾ-ಕಾಲೇಜು, ಕೆಲಸಗಳಿಗೆ ತೆರಳಿದ್ದ ಈ ಭಾಗದ ಜನರು ಇನ್ನೊಂದು ಬದಿಯಲ್ಲಿ ರಾತ್ರಿವರೆಗೂ ಉಳಿಯಬೇಕಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.