ಹನುಮಸಾಗರದ ಪಶು ಆಸ್ಪತ್ರೆಯಲ್ಲಿ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ, ಜಾನುವಾರು ಅಧಿಕಾರಿ ಎಂ.ಜಿ.ಹೊಳೆಆಲೂರು, ಜಾನುವಾರುಗಳ ಸಹಾಯಕ ಫೀರಸಾಬ್ ಹೊಸಮನಿ, ಭೈಪ್ ಸಂಸ್ಥೆ ಅಧಿಕಾರಿ ಮಂಜುನಾಥ ಮಾಳಶೆಟ್ಟಿ, ಮೈತ್ರಿ ಕಾರ್ಯಕರ್ತ ಗಂಗಾಧರ ನಾಗೂರ, ರೈತ ಸಂಘದ ಹೋಬಳಿ ಘಟಕದ ಅಧ್ಯಕ್ಷ ಶರಣಪ್ಪ ಬಾಚಲಾಪುರ, ಸ್ಥಳೀಯ ಅಧ್ಯಕ್ಷ ಯಮನೂರಪ್ಪ ಮಡಿವಾಳರ ಇತರರಿದ್ದರು. 
ಜಿಲ್ಲೆ

ಕಾಲುಬಾಯಿ ರೋಗ ತಡೆಗೆ ಲಸಿಕೆ ಹಾಕಿಸಿ

Kopala - Desk - Eraveni

ಹನುಮಸಾಗರ: ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಜಾನುವಾರು ಅಧಿಕಾರಿ ಎಂ.ಜಿ.ಹೊಳೆಆಲೂರು ಹೇಳಿದರು.

ಪಟ್ಟಣದ ಪಶು ಆಸ್ಪತ್ರೆಯಲ್ಲಿ ಭಾನುವಾರ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಏಳನೇ ಸುತ್ತಿನ ಕಾಲು ಬಾಯಿ ಹಾಗೂ ಚರ್ಮಗಂಟು ರೋಗ ನಿಯಂತ್ರಣದ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಲು ಬಾಯಿ ರೋಗವು ದನ, ಎಮ್ಮೆ, ಹಂದಿ ಸೇರಿ ಇತರೆ ಜಾನುವಾರುಗಳಿಗೆ ತಗುಲುವ ರೋಗವಾಗಿದೆ. ಈ ರೋಗದಿಂದ ಜಾನುವಾರಗಳು ಗುಣಮುಖವಾದರೂ ಸಹ ಹಾಲಿನ ಇಳುವರಿ ಕಡಿಮೆ ಮತ್ತು ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ರೋಗಗಳು ಬಾರದಂತೆ ತಡೆಯಲು ಮುನ್ನೆಚ್ಚರಿಕೆಗೆ ಲಸಿಕೆ ಹಾಕಿಸಬೇಕು ಎಂದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್ ಸಾಬ ಮೂಲಿಮನಿ ಮಾತನಾಡಿ, ಚರ್ಮಗಂಟು ರೋಗ ಜಾನುವಾರುಗಳಿಗೆ ಮರಣಾಂತಿಕ ಕಾಯಿಲೆಯಾಗಿದೆ. ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ. ಈ ರೋಗಕ್ಕೆ ಇನ್ನೂ ಔಷಧ ಕಂಡು ಹಿಡಿದಿಲ್ಲವಾದ್ದರಿಂದ ರೋಗ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸುವುದು ಹಾಗೂ ರೋಗಪೀಡಿತ ಜಾನುವಾರುಗಳನ್ನು ಬೇರ್ಪಡಿಸಿ ಹಾಗೂ ನೊಣಗಳು ಕೂಡದಂತೆ, ಸೊಳ್ಳೆಪರದೆ ಕಟ್ಟುವುದು ಅವಶ್ಯಕ ಎಂದರು.

ರೈತರಾದ ಮುತ್ತಣ್ಣ ಹಲಕೂಲಿ, ಬಸವರಾಜ ಮೋಟಗಿ, ಅಹ್ಮದಸಾಬ ಮುದಗಲ್, ಮುತ್ತಣ್ಣ ಕಟಗಿ, ಶಿವಕುಮಾರ ಪೂಜಾರ, ರುದ್ರಪ್ಪ ಬಾಚಲಾಪುರ, ದಾವಲಸಾಬ ಬಸರಕೋಡ್, ವಿಶ್ವನಾಥ ಸೂಡಿ, ಅಶೋಕ ಹಾದಿಮನಿ, ಶಿವಕುಮಾರ, ಶ್ರೀಕಾಂತ ಕಂದಗಲ್ಲ, ಉಮೇಶ ರಾಠೋಡ, ಪಶುಸಖಿಯರಾದ ದೀಪಾ ಸೂಡಿ, ಲಕ್ಷ್ಮೀ ಬಡಿಗೇರ ಇತರರಿದ್ದರು.