ಜಿಲ್ಲೆ

"ಕಿಕ್ ಸ್ಟಾರ್ಟ್" ಫುಟ್ಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ

reportermys

ಮಡಿಕೇರಿ:
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾದ "ಕಿಕ್ ಸ್ಟಾರ್ಟ್" ಫುಟ್ಬಾಲ್ ತಂಡಕ್ಕೆ ಅಮ್ಮತ್ತಿ ಫ್ರೌಡಶಾಲಾ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಂಡರ್ ೧೧ ರಿಂದ ೨೧ ವರೆಗಿನ ವಯೋಮಾನದ ಪುರುಷ ಹಾಗೂ ಮಹಿಳಾ ತಂಡಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕೊಡಗಿನ ವಿವಿಧ ಭಾಗಗಳ ೪೦೦ ಕ್ಕೂ ಹೆಚ್ಚು ಯುವ ಫುಟ್ಬಾಲ್ ಆಟಗಾರರು ಭಾಗವಹಿಸಿದ್ದರು.

ಆಯ್ಕೆ ಪ್ರಕ್ರಿಯೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅಂತಾರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ,ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಫುಟ್ಬಾಲ್ ಆಟಗಾರರು ಹೆಚ್ಚಾಗಿ ಕಂಡು ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಯುವ ಫುಟ್ಬಾಲ್ ಆಟಗಾರರಿಗೆ ಚಿಕ್ಕ ವಯಸ್ಸಿನಲ್ಲೇ ಪ್ರೋತ್ಸಾಹ ಹಾಗೂ ತರಬೇತಿ ನೀಡುವುದು ಅತ್ಯವಶ್ಯಕವಾಗಿದೆ ಎಂದರು.

ಈ ಸಂದರ್ಭ ಕಿಕ್ ಸ್ಟಾರ್ಟ್ ಸಂಸ್ಥಾಪಕ ಹಾಗೂ ಸಿ.ಇ.ಓ ಲಕ್ಷ್ಮಣ್ ಭಟ್, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಪಾಣತ್ತಲೆ, ಕಾರ್ಯದರ್ಶಿ ನಾಗೇಶ್, ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಕಿಕ್ ಸ್ಟಾರ್ಟ್ ಮ್ಯಾನೇಜರ್ ಶರವಣ ಧರ್ಮಣ್, ಮುಖ್ಯ ತರಬೇತುದಾರ ರಘುಕುಮಾರ್, ತರಬೇತುದಾರ ವಿಮಲ್,ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಖಜಾಂಜಿ ದೀಪು ಮಾಚಯ್ಯ, ಸದಸ್ಯರಾದ ದಿಲನ್ ಉತ್ತಯ್ಯ, ಅರುಣ್ ಕುಮಾರ್ ಅಮ್ಮತ್ತಿ, ಮಹೇಂದ್ರ ಸುಂಟ್ಟಿಕೊಪ್ಪ ಹಾಗೂ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಇಸ್ಮಾಯಿಲ್ ಕಂಡಕರೆ ಇದ್ದರು.