ಜಿಲ್ಲೆ

ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ

ಬೈಲಕುಪ್ಪೆ: ಇಲ್ಲಿನ ಒಂದನೇ ಕ್ಯಾಂಪ್ ರಸ್ತೆಯಲ್ಲಿರುವ ಪಶುಪಾಲನಾ ಇಲಾಖೆ ಆವರಣದಲ್ಲಿ ರಾಸುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಲುಬಾಯಿ ಜ್ವರ ತಡೆಯುವ ಚುಚ್ಚುಮದ್ದು ಹಾಕಲಾಯಿತು.


ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡಹೊನ್ನೂರು, ಮಂಚದೇವನಹಳ್ಳಿ, ಟಿಬೆಟ್, ಹಳ್ಳಿಕುಂಬ್ರೆ ಸೇರಿದಂತೆ 19ಕ್ಕೂ ಹೆಚ್ಚು ಹಳ್ಳಿಗಳಿದ್ದು, 3,480 ರಾಸುಗಳು ಸರ್ವೇ ಮಾಡಲಾಗಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಚುಚ್ಚುಮದ್ದು ನೀಡಲಾಗಿದ್ದು, ಉಳಿದ ರಾಸುಗಳಿಗೆ ನಿತ್ಯ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ಪಶುವೈದ್ಯ ಡಾ.ರವಿಕುಮಾರ್ ತಿಳಿಸಿದರು.


ಪಶುವೈದ್ಯಕೀಯ ಪರೀಕ್ಷಕ ಬಿ.ಡಿ.ನಾಗರಾಜು, ಸಿಬ್ಬಂದಿ ಕಾರ್ತಿಕ್ ಇತರರಿದ್ದರು.