ಜಿಲ್ಲೆ

ಲಸಿಕೆಯಿಂದ ಕಾಲುಬಾಯಿ ರೋಗ ನಿಮೂರ್ಲನೆ

ತುಮಕೂರು ಡೆಸ್ಕ್

ಶಿರಾ: ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಎಲ್ಲ ರಾಸುಗಳಿಗೆ ಲಸಿಕೆ ಮಾಡಿಸುವ ಮೂಲಕ ಕಾಲುಬಾಯಿ ಜ್ವರ ರೋಗವನ್ನು ನಿಮೂರ್ಲನೆ ಮಾಡಬಹುದಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್​.ಆರ್​.ಗೌಡ ತಿಳಿಸಿದರು.

ಶಿರಾ ನಗರದ ಪಶುಪಾಲನಾ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 8ನೇ ಸುತ್ತಿನ ಕಾಲುಬಾಯಿ ಜ್ವರ ರೋಗಕ್ಕೆ ಲಸಿಕೆ ನೀಡುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರಾಸುಗಳಿಗೆ ರಸಿಕೆ ಮಾಡಿಸದೆ ಇದ್ದಲ್ಲಿ ಇಡೀ ಗ್ರಾಮಕ್ಕೆ ರೋಗ ಹರಡುತ್ತದೆ. ಇದರಿಂದ ರೈತರಿಗೆ ಭಾರಿ ನಷ್ಟ ಉಂಟಾಗುತ್ತದೆ ಆದ್ದರಿಂದ ಪ್ರತಿಯೊಂದು ಗ್ರಾಮದಲ್ಲಿಯೂ ಸಹ ಶೇ.100 ಪ್ರಗತಿ ಸಾಧಿಸಬೇಕು ಎಂದರು.