ಮೈಸೂರು: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಶನಿವಾರ ನಗರದ ಬಂಡಿಪಾಳ್ಯದ ಸಗಟು ಮಳಿಗೆಗೆ ಭೇಟಿ ನೀಡಿ ಧಾನ್ಯಗಳನ್ನು ಪರಿಶೀಲನೆ ನಡೆಸಿದರು.
ಅಕ್ಕಿ, ರಾಗಿಯ ಗುಣಮಟ್ಟದ ಕುರಿತು ಪರಿಶೀಲಿಸಿ ಉತ್ತಮವಾದ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು. ಸಗಟು ಮಳಿಗೆಯನ್ನು ಪರಿಶೀಲಿಸಿ ಸಗಟು ಮಳಿಗೆಯು ಉತ್ತಮವಾಗಿದೆ ಎಂದು ಸಿಬ್ಬಂದಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಗಟು ಮಳಿಗೆಯಲ್ಲಿ ಕೆಲಸಗಾರನ್ನು ಮಾತನಾಡಿಸಿ ಅವರ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡಿದರು. ಈ ಸಂದರ್ಭ ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್, ಜಂಟಿ ಉಪ ನಿರ್ದೇಶಕ ಮಂಟೇಸ್ವಾಮಿ, ಸಗಟು ಮಳಿಗೆಯ ಸಹಾಯ ನಿರ್ದೇಶಕ ಕಿರಣ್ ಹಾಗೂ ಇತರರು ಇದ್ದರು.