ರಬಕವಿ/ಬನಹಟ್ಟಿ: ಅನ್ನದಾನಕ್ಕಿಂತ ಮಿಗಿಲಾದ ಮತ್ತೊಂದು ದಾನವಿಲ್ಲ. ಸಕಲ ಜೀವರಾಶಿಗಳಿಗೂ ಅನ್ನ, ನೀರು ಮತ್ತು ಬಟ್ಟೆ ಮುಖ್ಯವಾಗಿದೆ ಎಂದು ಹಿರಿಯ ಪತ್ರಕರ್ತ ನೀಲಕಂಠ ದಾತಾರ ಹೇಳಿದರು.
ರಬಕವಿಯ ದಾನಮ್ಮ ದೇವಸ್ಥಾನದಲ್ಲಿ ಡಿ.ಕೆ. ಕೊಟ್ಟರಶೆಟ್ಟಿ ಹಾಗೂ ಭಾರತ ಗ್ಯಾಸ್ ಜಂಟಿಯಾಗಿ ಏರ್ಪಡಿಸಿದ್ದ ಅನ್ನ ದಾಸೋಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ, ವಿಜಯಕುಮಾರ ನಾಶಿ, ಬಸವರಾಜ ದಲಾಲ, ಸಂಗಯ್ಯ ಅಮ್ಮಣಗಿಮಠ, ಡಾ.ಜಿ.ಎಚ್. ಚಿತ್ತರಗಿ, ಮಲ್ಲಿಕಾರ್ಜುನ ಗಡೆಣ್ಣವರ, ವಿಜಯಕುಮಾರ ಹಲಕುರ್ಕಿ, ಸಂಗಮೇಶ ಚಿತ್ತರಗಿ, ಸುಭಾಸ ತಳವಾರ, ಸಂಗಮೇಶ ಗುಣಕಿ, ಸಂಗಮೇಶ ಪರಮಶೆಟ್ಟಿ, ಭಾರತ್ ಗ್ಯಾಸ್ ಸಿಬ್ಬಂದಿ ಇದ್ದರು.