ಹುಬ್ಬಳ್ಳಿ: ಎಸ್ಎಸ್ಕೆ ಗೋಕುಲ ರೋಡ್ ಪಂಚ ಟ್ರಸ್ಟ್ ಕಮಿಟಿ ವತಿಯಿಂದ ದಸರಾ ಹಬ್ಬದ ನಿಮಿತ್ತ ಸಮಾಜದ ಬಡವರಿಗೆ ಆಹಾರ ಧಾನ್ಯದ ಕಿಟ್ಗಳನ್ನು ಬುಧವಾರ ವಿತರಿಸಲಾಯಿತು. ಎಸ್ಎಸ್ಕೆ ಹು-ಧಾ ಅಧ್ಯಕ್ಷ ಸತೀಶ ಮೆಹರವಾಡೆ, ಮಾಜಿ ಶಾಸಕ ಅಶೋಕ ಕಾಟವೆ, ಪ್ರಮುಖರಾದ ವಿಠ್ಠಲ ಲದವಾ, ಎಸ್.ಕೆ. ಬದ್ದಿ, ಎನ್.ಎನ್. ಖೋಡೆ, ಡಿ.ಪಿ. ದಲಬಂಜನ, ನಾರಾಯಣಸಾ ನಿರಂಜನ, ಯುವಕ ಮತ್ತು ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.