ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಬೇಕಲ್ ಫುಡ್ ಬಿಯೆನ್ನೆಲ್ ಅಂಗವಾಗಿ ಬೇಕಲ್ ಬೀಚ್‌ನಲ್ಲಿ ಬಿಆರ್‌ಡಿಸಿ, ಬೇಕಲ್ ಬೀಚ್ ಪಾರ್ಕ್, ಕುಟುಂಬಶ್ರೀ, ಬೇಕಲ್‌ನ ಪಂಚತಾರಾ ಹೋಟೆಲ್, ತಾಜ್, ಗೇಟ್‌ವೇ, ಲಲಿತ್ ಫುಡ್ ಕ್ರಾಫ್ಟ್ ಇನ್‌ಸ್ಟಿಟ್ಯೂಟ್ ಸಹಯೋಗದೊಂದಿಗೆ ಫೈವ್ ಸ್ಟಾರ್ ಫುಡ್ ಫೆಸ್ಟ್ ಆಯೋಜಿಸಲಾಯಿತು.
ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು. ಏಷ್ಯನ್, ಕಾಂಟಿನೆಂಟಲ್ ಆಹಾರ, ವಿವಿಧ ವಿಶೇಷ ಭಕ್ಷೃಗಳನ್ನು ಮೇಳದಲ್ಲಿ ಪರಿಚಯಿಸಲಾಗುತ್ತಿದೆ. ತಾಜ್ ಬೇಕಲ್ ಅವರ ಆಹಾರ ಭಕ್ಷೃಗಳನ್ನು ಪಾಂಡಿಚೇರಿಯ ಮೂಲದ ಬಾಣಸಿಗ ಅಂಬಾಲಕ ಅವರ ನೇತೃತ್ವದಲ್ಲಿ ತಯಾರಿಸಲಾಗುತ್ತದೆ. ತಾಜ್‌ನ ಸ್ಟಾಲ್‌ನಲ್ಲಿ ಚೀಸ್ ಗಾರ್ಲಿಕ್ ಬ್ರೆಡ್, ಹಾಟ್ ಡಾಗ್ಸ್, ರ‌್ಯಾಪ್ಸ್, ರೋಲ್ಸ್, ಗಾರ್ಡನ್ ಸ್ಪೆಷಲ್ಸ್, ಬೇಕಲ್ ಸ್ಪೆಷಲ್ಸ್ ಸೇರಿದಂತೆ ವಿವಿಧ ಸಸ್ಯಾಹಾರಿ, ಮಾಂಸಾಹಾರಿ ಖಾದ್ಯ ಲಭ್ಯವಿದೆ. ಲಲಿತ್ ಸ್ಟಾಲ್‌ನಲ್ಲಿ ಮೀನು, ಸಿಗಡಿ, ಕೋಳಿ, ತರಕಾರಿ ಭಕ್ಷೃ ಲಭ್ಯವಿವೆ. ಮೀನು ಸ್ಟೂೃ, ಇಲಾ ನೀರ್‌ಲಲಿತ್ ಸ್ಟಾಲ್‌ನಲ್ಲಿ ಕ್ರೀಮಿ ಆಂಗ್ಲೈಸ್, ಡೆಕ್ಕನ್ ಫ್ರಾಂಚೈಸಸ್, ಸಸ್ಯಾಹಾರಿ, ಮಾಂಸಾಹಾರಿ ಭಕ್ಷೃ ಲಭ್ಯವಿರಲಿವೆ. ಬೇಕಲ್ ಬೀಚ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಕುಟುಂಬಶ್ರೀ ಮಳಿಗೆಗಳು ಏ.20ರವರೆಗೆ, ನಕ್ಷತ್ರ ಹಾಲ್ಸ್‌ನ ಮಳಿಗೆ ಏ.19ರವರೆಗೆ ತೆರೆದಿರುತ್ತವೆ.
ಪಾರ್ಕ್‌ನಲ್ಲಿ ಮಳಿಗೆ ಸ್ಥಾಪನೆ
ಪಂಚತಾರಾ ಹೋಟೆಲ್‌ನಲ್ಲಿ ಲಭ್ಯ ಆಹಾರ ಪದಾರ್ಥಗಳನ್ನು ಪ್ರವಾಸಿಗರು, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ತಲುಪಿಸುವ ಉದ್ದೇಶದಿಂದ ಬೇಕಲ್ ಬೀಚ್ ಪಾರ್ಕ್‌ನಲ್ಲಿ ವಿಶೇಷ ಮಳಿಗೆ ಸ್ಥಾಪಿಸಲಾಗಿದೆ.