ಬಾಳೆಹೊನ್ನೂರು: ಮೆಣಸುಕೊಡಿಗೆಯಲ್ಲಿ ವಿದ್ಯಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ 38ನೇ ವರ್ಷದ ವಿದ್ಯಾಗಣಪತಿ ಮಹೋತ್ಸವದಲ್ಲಿ ಮುಸ್ಲಿಮರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ಬಿ.ಕಣಬೂರು ಗ್ರಾಪಂ ಸದಸ್ಯ ಇಬ್ರಾಹಿಂ ಶಾಫಿ, ಆಟೋ ಸಂಘದ ಮಾಜಿ ಉಪಾಧ್ಯಕ್ಷ ಅಬೂಬಕರ್ ಸಿದ್ದಿಕ್, ಮಸೀದಿಕೆರೆಯ ಎಸ್.ಕೆ.ರಫೀಕ್, ಶಾಹಿದ್, ಆರೀಫ್, ಫೈಜಲ್, ಶರೀಫ್ ಸೇರಿದಂತೆ ಹಲವು ಮುಸ್ಲಿಂ ಯುವಕರು ಗಣೇಶೋತ್ಸವದ ಅಂತಿಮ ದಿನ ಮಧ್ಯಾಹ್ನ 300ಕ್ಕೂ ಅಧಿಕ ಭಕ್ತರಿಗೆ ಸ್ವಂತ ಖರ್ಚಿನಿಂದ ಅನ್ನದಾನ ಮಾಡಿದರು. ಇದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಆಯೋಜಿಸಿರುವ 66ನೇ ಗಣೇಶೋತ್ಸವ ಅಂಗವಾಗಿ ಸೆ.12ರಂದು ಮಧ್ಯಾಹ್ನ 1 ಗಂಟೆಗೆ ಹಾಗೂ ಸಂಜೆ 7.30ಕ್ಕೆ ಗಣಪತಿಗೆ ಮಹಾಪೂಜೆ ನಡೆಯಲಿದೆ. ರಾತ್ರಿ 8 ಗಂಟೆಗೆ ಉಡುಪಿ ಕಲಾಮಯಂ ತಂಡದ ಹೇಮಂತ್ ಬೈಲೂರು ನೇತೃತ್ವದಲ್ಲಿ ಜಾನಪದ ನೃತ್ಯ, ಸಂಗೀತ ಮತ್ತು ವಿವಿಧ ವಾದ್ಯ ಪರಿಕರಗಳ ಸಮ್ಮಿಲನದ ಜಾನಪದ ವೈಭವ ಕಾರ್ಯಕ್ರಮ ನಡೆಯಲಿದೆ.