ಅಳವಂಡಿ ಸಮೀಪದ ಕವಲೂರು ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಲಾಯಿತು. ಪ್ರಮುಖರಾದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ರಾಷಿದ್ ಅಹಮ್ಮದ್ ಖಾದ್ರಿ, ಸೈಯದ್ ಅನ್ವರ್ ಖಾದ್ರಿ, ನಜೀರ್ ಅಹ್ಮದ್ ಖಾಜಿ, ಅನ್ವರ್ ಹುಸೇನ್ ಗಡಾದ, ಗುರು ಬಸವರಾಜ ಹಳ್ಳಿಕೇರಿ ಇತರರು ಇದ್ದರು. 
ಜಿಲ್ಲೆ

ಸೂಫಿ-ಸಂತರ ಸಂದೇಶಗಳನ್ನು ಅನುಸರಿಸಿ

ಅಳವಂಡಿ: ಸೂಫಿ -ಸಂತರು ಸಾರಿದ ಸಂದೇಶಗಳನ್ನು ಅಳವಡಿಸಿಕೊಂಡು ಸುಂದರವಾದ ಬದುಕು ರೂಪಿಸಿಕೊಳ್ಳಬೇಕು ಎಂದು ಅಳವಂಡಿಯ ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಕವಲೂರು ಗ್ರಾಮದಲ್ಲಿ ಹಜರತ್ ಮೆಹಬೂಬ್ ಸುಭಾನಿ ಉರುಸ್ ಕಮೀಟಿ ವತಿಯಿಂದ ಆಯೋಜಿಸಿದ್ದ ಹಜರತ್ ಮೆಹಬೂಬ್ ಸುಭಾನಿ ಅವರ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಸಭೆ ಉದ್ದೇಶಿಸಿ ಸೋಮವಾರ ಮಾತನಾಡಿದರು.

ಬೆಳಗಟ್ಟಿಯ ಸೈಯದ್ ಮುಸ್ತಫಾ ಖಾದ್ರಿ ಉರ್ ಅನ್ವರ್ ಖಾದ್ರಿ ಸಾಹೇಬ ಮಾತನಾಡಿ, ದಯೆ, ಕರುಣೆ, ನೆಮ್ಮದಿ ಇನ್ನೊಬ್ಬರಿಗೆ ತೊಂದರೆ ಹಾಗೂ ಯಾರಿಗೂ ಕೆಟ್ಟದನ್ನು ಮಾಡದೇ ಇದ್ದರೆ ನಿಜವಾದ ಧರ್ಮವನ್ನು ಪಾಲಿಸಿದಂತಾಗುತ್ತದೆ. ಪ್ರತಿಯೊಬ್ಬರಲ್ಲಿ ನಾವು ಭಾರತೀಯರು ಎಂಬ ಭಾವನೆ ಬೆಳೆಯಬೇಕು ಎಂದರು.

ಸಮಾಜ ಚಿಂತಕ ರಷಿದ್ ಅಹಮ್ಮದ್ ಖಾದ್ರಿ ಮಾತನಾಡಿದರು.

ಪ್ರಮುಖರಾದ ನಾಗಪ್ಪ ತುರಕಾಣಿ, ತಿಮ್ಮಣ್ಣ ಸಿದ್ನೆಕೊಪ್ಪ, ಮುತ್ತಣ್ಣ ಬಿಸರಳ್ಳಿ, ಸೋಮಶೇಖರ್ ಗೌಡ, ಜಾವೀದ್ ಸಾಬ ಮಾಳೆಕೊಪ್ಪ, ನಿಂಗಪ್ಪ, ಹನುಮಂತ ಹೊಸಮನಿ, ನಾಗರಾಜ ಕಗ್ಗಲ್, ಬದ್ರುದ್ದೀನ್ ಷಾ ಮಕಾಂದಾರ, ಮೆಹಬೂಬ ಮುಲ್ಲಾ, ವಿಜಯಕುಮಾರ, ಸಂಗನಗೌಡ ಇತರರಿದ್ದರು.