ತಾಳಿಕೋಟೆ ತಾಲೂಕಿನ ಸುೇತ್ರ ಬಿಳೇಭಾವಿ ಗ್ರಾಮದಲ್ಲಿ ವಿದ್ಯಾನಿ-ಧಿ ತೀರ್ಥರ 160ನೇ ಆರಾಧನೆ ಮಹೋತ್ಸವ ಅಂಗವಾಗಿ ಬೃಂದಾವನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 
ಜಿಲ್ಲೆ

ಧರ್ಮದ ಹಾದಿಯಲ್ಲಿ ಸಾಗಿ

ಗಿರೀಶ ಸಗರ

ತಾಳಿಕೋಟೆ: ಕಣ್ವಮಠ ಪರಂಪರೆಯ ನಾಲ್ಕನೇ ಯತಿಗಳಾದ ವಿದ್ಯಾನಿಧಿ ತೀರ್ಥರ 160 ನೇ ಆರಾಧನಾ ಮಹೋತ್ಸವ ನಿಮಿತ್ತ ತಾಳಿಕೋಟೆ ತಾಲೂಕಿನ ಬಿಳೇಭಾವಿ ಗ್ರಾಮದಲ್ಲಿ ಹಾಲಿ ಪೀಠಾಧ್ಯಕ್ಷ ವಿದ್ಯಾ ಕಣ್ವ ವಿರಾಜ ತೀರ್ಥರ ಸಾನ್ನಿಧ್ಯದಲ್ಲಿ ಸಂಸ್ಥಾನ ಮಹಾ ಪೂಜೆ ನಡೆಯಿತು.

ವಿಜಯಪುರದ ಪ್ರಸನ್ನಾಚಾರ್ಯ ಕಟ್ಟಿ ಪ್ರವಚನ ನೀಡಿ, ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕು. ಧರ್ಮ ರಣೆಯಲ್ಲಿ ಯಾರು ತೊಡಗಿಕೊಳ್ಳುತ್ತಾರೋ ಅವರನ್ನು ಧರ್ಮವು ರಸುತ್ತದೆ ಎಂದರು. ನೀಲಕಂಠರಾವ ತಲೆಖಾನ ಮಾತನಾಡಿ, ಸಮಾಜ ಸಂಟನೆಯಿಂದ ಕೂಡಿರಬೇಕು.

ಸಂಟನೆಯು ಸಂಸ್ಕಾರದಿಂದ ಕೂಡಿರಬೇಕು. ಸಂಸ್ಕಾರ, ಸಂಸತಿಯನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಿಕೊಡುವಂತಹ ಕಾರ್ಯವನ್ನು ಪಾಲಕರು ಮಾಡಬೇಕು ಎಂದು ಸಲಹೆ ನೀಡಿದರು. ಅನುಪಮಾ ಅಂಬದಾಸ ಜೋಶಿ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು.

ಸವಿತಾ ಗಲಗಲಿ ಹಾಗೂ ತಂಡದವರಿಂದ ಜರುಗಿದ ಕೃಷ್ಣನ ನೃತ್ಯ ರೂಪಕ ಮತ್ತು ಕೋಲಾಟ ಭಕ್ತರ ಮನ ಸೆಳೆಯಿತು. ತಾಳಿಕೋಟೆ ಗಾಯತ್ರಿ ಭಜನಾ ಮಂಡಳಿ, ಮಹಾಲಕ್ಷ್ಮೀ ಭಜನಾ ಮಂಡಳಿ ಹಾಗೂ ವಿಜಯಪುರದ ಶ್ರೀಪರ್ಣಿಕ ಭಜನಾ ಮಂಡಳಿ ಅವರು ನಾಮ ಸಂಕೀರ್ತನೆ ನಡೆಸಿಕೊಟ್ಟರು.

ಆರಾಧನೆಗೆ ತಾಳಿಕೋಟೆ, ವಿಜಯಪುರ, ಲಿಂಗಸುಗೂರು, ಕೊಡೇಕಲ್​, ನಾಗೂರ, ರಾಯಚೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು.

ಗಂಗಾಧರ ಜೋಶಿ, ವೆಂಕಟೇಶಾಚಾರ್ಯ ಗ್ರಾಮಪುರೋಹಿತ, ರವಿ ಜೋಶಿ, ಯಲಗುರೇಶ ಚಬನೂರ, ಶಂಕರಭಟ್​ ಅಗ್ನಿಹೋತ್ರಿ, ಸಮಿತಿ ಅಧ್ಯರಾದ ಗುರುರಾಜ ಕುಲಕರ್ಣಿ, ಮಲ್ಹರಾವ ದೇಶಪಾಂಡೆ, ಭೀಮರಾವ ಕುಲಕರ್ಣಿ, ಸುನೀಲ ಕುಲಕರ್ಣಿ, ಮುತ್ತಣ್ಣ ದೇಶಪಾಂಡೆ, ಶಶಿಕಾಂತ ದೇಶಪಾಂಡೆ, ರವೀಂದ್ರ ದೇಶಪಾಂಡೆ, ನಾಗೇಶ ದೇಶಪಾಂಡೆ, ಅಶೋಕ ದೇಶಪಾಂಡೆ, ವಿಲಾಸ ದೇಶಪಾಂಡೆ, ರಾವೇಂದ್ರ ದೇಶಪಾಂಡೆ, ಬಸವಂತರಾವ ದೇಶಪಾಂಡೆ, ಪ್ರಹ್ಲಾದ ದೇಶಪಾಂಡೆ ಉಪಸ್ಥಿತರಿದ್ದರು.

ವಿಶೇಷ ಸೇವೆ ಸಲ್ಲಿಸಿದ ಜಯಶ್ರೀ ಕನ್ನೂರ, ಚಂದ್ರಶೇಖರ ಕುಲಕರ್ಣಿ ನಾಗೂರ, ರಾವೇಂದ್ರ ಚಾರ, ಶೇಷಗಿರಿರಾವ ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು.