ಅರಕಲಗೂಡು ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಎಚ್.ಪಿ.ಶ್ರೀಧರ್‌ಗೌಡ, ಸೋಮಶೇಖರ್, ಕುಮಾರ್, ಎಸ್.ಎಲ್. ಗಣಪತಿ, ವೀರೇಂದ್ರ ಇತರರಿದ್ದರು. 
ಜಿಲ್ಲೆ

ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಿರಿ

ಅಭಿನಯ್ ಎಚ್.ಎಂ

ಅರಕಲಗೂಡು: ಸರ್ವರಿಗೂ ಸಮಬಾಳು-ಸಮಪಾಲು ಒದಗಿಸಿರುವ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ವಿಶ್ವ ಶ್ರೇಷ್ಠವಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೋಷಣೆಗೊಳಗಾಗಿದ್ದ ಮಹಿಳೆಯರು, ದೀನ ದಲಿತರು, ಬಡವರಿಗೆ ಅಂಬೇಡ್ಕರ್ ಸಂವಿಧಾನದಲ್ಲಿ ನ್ಯಾಯ ಒದಗಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆದರೆ ದೇಶಕ್ಕೆ ಒಳಿತಾಗಲಿದೆ ಎಂದರು.

ಮುಖಂಡರಾದ ಎಸ್.ಎಲ್.ಗಣಪತಿ, ಚಂದೇಗೌಡ, ಪ್ರಸನ್ನ, ನಾಗರಾಜು, ಕುಪ್ಪೆ ವೀರಣ್ಣ, ಓಡನಹಳ್ಳಿ ಪುಷ್ಪಕುಮಾರ್, ಹೇಮಂತಕುಮಾರ್, ಬಾಲು, ಜಾಕೀರ್ ಹುಸೇನ್, ಸೋಮಶೇಖರ್, ಮಲ್ಲೇಶ್, ಪುಟ್ಟಯ್ಯ, ದಶರಥ, ತಂವೀರ್ ಖಾನ್, ರಂಗನಾಥ್, ಗಣೇಶ್, ಕಾಂತರಾಜು, ರಫೀಕ್ ಇತರರಿದ್ದರು. ನಂತರ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು.