ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಶ್ರೀಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಅಹಿಂದ ವೇದಿಕೆ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿದರು. ಸಂಡೂರಿನ ಪ್ರಭುದೇವರ ವಿರಕ್ತ ಮಠದ ಪ್ರಭು ಸ್ವಾಮೀಜಿ, ಸಮಿತಿಯ ಪದಾಧಿಕಾರಿಗಳಾದ ಎಚ್.ಶಿವಾನಂದ, ಬುಳ್ಳನ ಗೌಡ್ರು ಇತರರಿದ್ದರು. 
ಜಿಲ್ಲೆ

ಮಹಾತ್ಮರ ಆದರ್ಶಗಳನ್ನು ಅನುಸರಿಸಿ - ಅಹಿಂದ ವೇದಿಕೆ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಹೇಳಿಕೆ

ಹಗರಿಬೊಮ್ಮನಹಳ್ಳಿ: ಖಾದಿಯಿಂದ ಕಾವಿ ದೂರವಿರಲಿ. ಮಠಮಾನ್ಯಗಳಲ್ಲಿ ರಾಜಕೀಯ ಸಲ್ಲ ಎಂದು ಅಹಿಂದ ವೇದಿಕೆ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಹೇಳಿದರು.

ಹಂಪಾಪಟ್ಟಣದಲ್ಲಿ ಶ್ರೀ ಶರಣಬಸವೇಶ್ವರ ಸೇವಾ ಹಾಗೂ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಲಬುರಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಸುಧಾರಣೆ ಮಾಡಿದ ಮಹಾತ್ಮರ ಆದರ್ಶಗಳನ್ನು ಅನುಸರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಪುರಾಣ ಹಾಗೂ ಧರ್ಮಸಭೆ ನಡೆಯುವುದರಿಂದ ಸಂಸ್ಕೃತಿ ಇನ್ನೂ ಉಳಿದಿದೆ ಎಂದು ಹೇಳಿದರು.

ಸಂಡೂರಿನ ಪ್ರಭುದೇವರ ವಿರಕ್ತ ಮಠದ ಪ್ರಭುಸ್ವಾಮೀಜಿ ಮಾತನಾಡಿ, ಸೌಹಾರ್ದತೆ ಎನ್ನುವುದು ಹಳ್ಳಿಗಳಲ್ಲಿ ಉಳಿದುಕೊಂಡಿದೆ. ಇದಕ್ಕೆ ರಾಜಕೀಯ ಬೆರೆಸದೆ, ಪ್ರತಿಯೊಂದು ಸಮುದಾಯ ಸಹೋದರ ಭಾವನೆಯಿಂದ ಬಾಳಬೇಕು ಎಂದರು. ಸಮಿತಿ ಪದಾಧಿಕಾರಿಗಳಾದ ಎಚ್.ಶಿವಾನಂದ, ಬುಳ್ಳನ ಗೌಡ್ರು, ಈಶ್ವರ ಗೌಡ್ರು, ಉಪ್ಪಾರ್ ನಾಗಪ್ಪ, ತಳವಾರ್ ಬಿದ್ದಪ್ಪ, ಮಾಲ್ವಿ ಕಿಟ್ಟಪ್ಪ, ಕೊಟ್ರೇಶ್, ಮಾತಾಟ್ರಸ್ಟ್ ಅಧ್ಯಕ್ಷ ಜಿ.ಶ್ರೀನಿವಾಸ್, ಆಕಾಶವಾಣಿ ಕಲಾವಿದ ಬಿ.ದೀಪಕ್‌ಸಿಂಗ್ ಅಜೇರಿ, ಪ್ರವಚನಕಾರರಾದ ಕುಳವಳ್ಳಿಯ ಓಂಗುರೂಜಿ ಸುಕುಮಾರ, ರಾಜಶೇಖರ ಕೇಶವರಾಯನಬಂಡಿ, ಪ್ರಮುಖರಾದ ಟಿ.ಹುಲಗಪ್ಪ, ಗಣೇಶಪ್ಪ, ಶಿವನಾಗಪ್ಪ ಇತರರಿದ್ದರು.