ಗೊರೇಬಾಳ ಶರಣಬಸವೇಶ್ವರ ದೇವಾಲಯದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ದೇವಸ್ಥಾನದ ಅರ್ಚಕ ಶಿವಕುಮಾರ ಸ್ವಾಮಿ, ಪ್ರಮುಖರಾದ ಎನ್.ದೇವೇಂದ್ರಗೌಡ, ಬಸವರಾಜ, ಬಸವರಾಜ, ಲಕ್ಷ್ಮೀರಡ್ಡಿ ಇತರರಿದ್ದರು. 
ಜಿಲ್ಲೆ

ಹೇಮರಡ್ಡಿ ಮಲ್ಲಮ್ಮ ಕಾಯಕ ನಿಷ್ಠೆ ಅನುಸರಿಸಿ

ಗೊರೇಬಾಳ: ಹೇಮರಡ್ಡಿ ಮಲ್ಲಮ್ಮ ತ್ರಿಕಾಲ ಲಿಂಗ ಪೂಜೆಯಲ್ಲಿ ನಿಷ್ಠಾವಂತರಾಗಿ ಸ್ತ್ರೀ ಕುಲಕ್ಕೆ ಮಾದರಿಯಾದ ಮಹಾಮಾತೆ ಎಂದು ಅರ್ಚಕ ಶಿವಕುಮಾರ ಸ್ವಾಮಿ ಹೇಳಿದರು.

ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರ 603ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಕಾರದ ಹಿನ್ನೆಲೆಯಿಂದ ಬಂದವರು. ಅವರ ಕಾಯಕ ನಿಷ್ಠೆಯನ್ನು ಪ್ರತಿಯೊಬ್ಬರೂ ಅನುಸರಿಸಿ ಜೀವನದಲ್ಲಿ ಸಮೃದ್ಧಿ ಪಡೆಯಬೇಕು ಎಂದರು. ಗ್ರಾಪಂ ಸದಸ್ಯ ಎನ್.ದೇವೇಂದ್ರಗೌಡ, ನಿವೃತ್ತ ಪೋಸ್ಟ್ ಮಾಸ್ಟರ್ ಬಸವರಾಜ, ಪ್ರಾಕೃಪಸ ನಿರ್ದೇಶಕ ಬಸವರಾಜ, ಪ್ರಮುಖರಾದ ಆರ್.ಸಿದ್ದಲಿಂಗೇಶಗೌಡ, ಲಕ್ಷ್ಮೀರಡ್ಡಿ, ಎನ್.ಚನ್ನಬಸವನಗೌಡ, ಎಸ್.ಬಸವರಾಜ, ಶರಣೇಗೌಡ, ಬಸವರಾಜ ಕನ್ನಾರಿ, ಎಸ್.ಸುಧಾಕರ್ ರಡ್ಡಿ, ಆರ್.ಮಹೇಶ್, ಇಂಗಳಗಿ ಸೋಮನಗೌಡ, ಚನ್ನನಗೌಡ, ಜೆ.ದೇವೇಂದ್ರಗೌಡ ಇತರರಿದ್ದರು.