ಐನಾಪುರ: ಗುರು-ಶಿಷ್ಯರ ಸಂಬಂಧ ಒಂದೇ ಇದ್ದಲ್ಲಿ ಜ್ಞಾನದ ಗಂಗೆ ನಿರಂತರವಾಗಿ ಹರಿಯುತ್ತದೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮಕ್ಕೆ ಮಲ್ಲಿಕಾರ್ಜುನ ಸ್ವಾಮೀಜಿ ಪದಾರ್ಪಣೆ ಮಾಡಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಹಾಗೂ ಬಸವೇಶ್ವರ ಮಹಾಸ್ವಾಮೀಜಿ ಗುರು ಸ್ವೀಕಾರವಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಅವರ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ಮುಕ್ತಿಹೊಂದಲು ಅಧ್ಯಾತ್ಮ ಚಿಂತನೆ, ಗುರುವಿನ ಮಾರ್ಗದರ್ಶನದ ಅಗತ್ಯವಾಗಿದೆ ಎಂದರು.
ತುಮಕೂರ ಶಿವಗಂಗೆ ಮಹಾಲಕ್ಷ್ಮೀ ಸಂಸ್ಥಾನ ಮಠದ ಜ್ಞಾನಾನಂದಪುರಿ ಸ್ವಾಮೀಜಿ ಮಾತನಾಡಿ, ಲಿಂ. ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಲಿಂ. ಸಿದ್ಧೇಶ್ವರ ಸ್ವಾಮೀಜಿ ಬದುಕಿನುದ್ದಕ್ಕೂ ಲೋಕದ ಹಿತವನ್ನೇ ಬಯಸಿದ್ದಾರೆ ಎಂದರು.
ಶಾಲಾ ಮಕ್ಕಳು ನೃತ್ಯ ಮಾಡಿ ರಂಜಿಸಿದರು. ಕೃಷ್ಣಾ ಕಿತ್ತೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಹೆಬ್ಬಳ್ಳಿ ಶಿವಾನಂದ ಮಠದ ಯೋಗಾನಂದ ಸ್ವಾಮೀಜಿ, ಟಾಕಳಿ ಮಲ್ಲಿಕಾರ್ಜುನ ತಪೋವನದ ಶಿವದೇವ ಸ್ವಾಮೀಜಿ, ಚಡಚಣ ಗುರುದೇವಾಶ್ರಮದ ಯೋಗಾನಂದ ಶ್ರೀಗಳು, ಶಿವಯ್ಯ ಹಿರೇಮಠ, ಪಂಚಾಕ್ಷರಯ್ಯ ಹಿರೇಮಠ, ಜ್ಯೋತಿ ಮಂಟೂರ, ಶಿವಗೌಡ ಚೌಗಲಾ ಇತರರು ಇದ್ದರು. ಮಲ್ಲಪ್ಪ ಬುರ್ಕಿ ಸಂಗೀತ ಸೇವೆ ನೀಡಿದರು.