ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ವಿವಿಧೆಡೆ ಸೋಯಾಬೀನ್ ಬೆಳೆಹಾನಿ ಮಾಡಿರುವ ಕೀಟದ ಬಗ್ಗೆ ರೈತರು ಕಷಿ ವಿಜ್ಞಾನಿಗಳ ಸಲಹೆ ಪಡೆದು ಪರಿಹಾರ ಕಂಡುಕೊಳ್ಳಬೇಕು ಎಂದು ಕೃಷಿ ಇಲಾಖೆ ಆತ್ಮ ತಾಂತ್ರಿಕ ವ್ಯವಸ್ಥಾಪಕ ಚಂದ್ರಕಾಂತ ಮರಡಿ ಹೇಳಿದರು.
ಪಟ್ಟಣದ ದೊಡವಾಡ ಗ್ರಾಮದ ಪಾಂಡುರಂಗ ಸಭಾಭವನದಲ್ಲಿ ಬೆಲಹೊಂಗಲ ಕಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮುಂಗಾರು ಸೋಯಾಬೀನ್ ಬೆಳೆ ಸಂರಣಾ ಜಾಗತಿ ಅಭಿಯಾನದಲ್ಲಿ ಮಾತನಾಡಿದರು.
ಮತ್ತಿಕೊಪ್ಪ ಕೆವಿಕೆ ಕಷಿ ಬೇಸಾಯ ತ ಜಿ.ಬಿ.ವಿಶ್ವನಾಥ ಮಾತನಾಡಿ, ಹೆಲಿಕೋವರ್ವ ಮತ್ತು ಕೋವರ್ಪಾ ಕೀಟಗಳು ಮೊದಲು ತೊಗರಿ ಬೆಳೆಯಲ್ಲಿದ್ದು, ಈಚೆಗೆ ಸೋಯಾಬೀನ್ ಬೆಳೆಗೆ ಲಗ್ಗೆ ಇಟ್ಟಿದೆ. ಈ ಕೀಟ ಹತೋಟಿಗೆ ಬ್ರೋಪ್ಲಾನಿಲಿಡೇ 300 ಜಿ/ಎಲ್ಎಸ್ಸಿ 0.06 ಪ್ರತಿ ಲೀಟರ್ ನೀರಿಗೆ ಅಂದರೆ, ಎಕರೆಗೆ 17 ಎಂಎಲ್ ಅಥವಾ ಟೆಟ್ರಾ ನಿಲಿಪ್ರೊಲ್ 200 ಎಸ್ಸಿ 0.6 ಎಂಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಒಟ್ಟಾರೆ ಎಕರೆಗೆ 180 ರಿಂದ 200 ಲೀಟರ್ ನೀರು (14 ರಿಂದ 15 ಪಂಪ್) ಔಷಧ ಪ್ರಮಾಣಗಳೊಂದಿಗೆ ಬೆಳೆಯ ಎಲ್ಲ ಭಾಗಗಳಿಗೂ ಮುಟ್ಟುವಂತೆ ಸಿಂಪಡಿಸಿದಾಗ ಬೆಳೆ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಪಿಕೆಪಿಎಸ್ ಅಧ್ಯ ನಿಂಗಪ್ಪ ಚೌಡಣ್ಣವರ ಮಾತನಾಡಿ, ಆ.31 ರವರೆಗೆ ರೆತರು ಸಲ್ ಬಿಮಾ ಯೋಜನೆ ಕಂತು ತುಂಬಿ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು. ಸಂಜಿವಿನಿ ಒಕ್ಕೂಟದ ಸದಸ್ಯರು, ರೆತರು ಇದ್ದರು.