ಜಿಲ್ಲೆ

ಸುರಕ್ಷತೆಗೆ ರಸ್ತೆ ನಿಯಮ ಪಾಲಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಿಮ್ಮ ಜೀವ ಸುರತವಾಗಿರಲು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಲಟಗಿ ಪಿಎಸ್​ಐ ಬಸವರಾಜ ಯದ್ದಲಗುಡ್ಡ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂ. ಕಲಟಗಿಯ ಗುಡ್​ನ್ಯೂಸ್​ ಕಾಲೇಜಿನ ಸಹಯೋಗದಲ್ಲಿ ಕಲಟಗಿ ತಾಲೂಕು ಗಂಭ್ಯಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಕಾನೂನು ಅರಿವು ಕುರಿತು ಅವರು ಮಾತನಾಡಿದರು.
ಯುವಕರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್​, ಕಾರು ಚಲಾಯಿಸುವಾಗ ಸೀಟ್​ ಬೆಲ್ಟ್​ ಹಾಕಬೇಕಲ್ಲದೆ, ಎಲ್ಲ ರಸ್ತೆ ನಿಯಮಗಳನ್ನು ಪಾಲಿಸಿದರೆ ಎಲ್ಲರೂ ಸುರತವಾಗಿ ಪ್ರಯಾಣ ಮಾಡಬಹುದು. ಸಾಮಾಜಿಕ ಜಾಲತಾಣ ಬಳಸುವವರು ಎಚ್ಚರಿಕೆ ವಹಿಸಬೇಕು. ಯಾವುದೇ ವೆಬ್​ಸೈಟ್​, ಲಿಂಕ್​ ನಿಖರತೆ ಅರಿತು ಬಳಸಬೇಕು. ಇಲ್ಲವಾದಲ್ಲಿ ಸೈಬರ್​ ಖದೀಮರು ನಿಮ್ಮ ಹಣ ಲೂಟಿ ಮಾಡಲು ಅವಕಾಶ ನೀಡಿದಂತಾಗುತ್ತದೆ. ಹಿಗಾಗಿ ಮೊಬೈಲ್​ ಬಳಸುವಾಗ ಎಚ್ಚರಿಕೆ ವಹಿಸಿ ಎಂದು ಯುವಕರಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂದ ಕಾರ್ಯದಶಿರ್ ಶಂಕರ ಹಲಗತ್ತಿ ಮಾತನಾಡಿ, ವಿದ್ಯಾಥಿರ್ಗಳು ತಮ್ಮ ಗ್ರಾಮಕ್ಕೆ ಸ್ವಯಂ ಸೇವೆ ಸಲ್ಲಿಸಲು ಆಗಮಿಸಿದ ಸಂದರ್ಭದಲ್ಲಿ ಅವರ ಜತೆಗೆ ಊರಿನ ಯುವಕರು ಕೈ ಜೋಡಿಸಿದರೆ ಒಂದು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬಹುದು ಎಂದರು.
ಸಂದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ, ಮಹಾದೇವ ಉಳ್ಳಾಗಡ್ಡಿ, ಅತಾ ಕುಬಿಹಾಳ, ಎನ್​.ಎಂ. ನಿಂಬಣ್ಣವರ, ರೆಹಮಾನಸಾಬ ಗೋಳಲ್ಲಿ, ಎನ್​ಎಸ್​ಎಸ್​ ಸ್ವಯಂ ಸೇವಕರು, ಗ್ರಾಮಸ್ಥರು, ಇತರರು ಇದ್ದರು.
ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀಲಮ್ಮ ಕಲಕೇರಿ ನಿರೂಪಿಸಿದರು. ನಂತರ ಹರ್ಲಾಪುರದ ಶಂಭಯ್ಯ ಹಿರೇಮಠ, ಸಿವೈಸಿಡಿ ಕಲಾ ಸಂ ಹಾಗೂ ತಂಡದವರು ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.