ಸರ್ಜಾಫುರದ ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ ಅತ್ತಿಬೆಲೆ ಉಪ ವಿಭಾಗ ಮತ್ತು ಸರ್ಜಾಪುರ ಬೆಸ್ಕಾಂನಿಂದ ರಾಷ್ಟ್ರೀಯ ವಿದ್ಯುತ್​ ಸುರತಾ ಸಪ್ತಾಹ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅತ್ತಿಬೆಲೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜ್​ ಕುಮಾರ್​ ಚಾಲನೆ ನೀಡಿದರು. ವಿದ್ಯುತ್​ ಗುತ್ತಿಗೆದಾರರ ಸಂದ ಅಧ್ಯ ಶಿವನಂದಾ ರೆಡ್ಡಿ, ಸಹಾಯಕ ಅಭಿಯಂತರ ಮೋಹನ್​ ಕುಮಾರ್​, ವಿಷ್ಣು ವರ್ಧನ, ನಾರಾಯಣಸ್ವಾಮಿ, ಎಲ್​.ಎನ್​.ರೆಡ್ಡಿ ಇತರರು ಇದ್ದರು. 
ಜಿಲ್ಲೆ

ವಿದ್ಯುತ್​ ಸುರಕ್ಷತಾ ನಿಯಮ ಪಾಲಿಸಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಸರ್ಜಾಪುರ : ಬೆಸ್ಕಾಂ ಎಷ್ಟೇ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಿದರೂ ಸಾರ್ವಜನಿಕ ವಲಯದ ರ್ನಿಲಕ್ಷ$್ಯದಿಂದ ವಿದ್ಯುತ್​ ಅವಡಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿರುವುದು ನೋವಿನ ಸಂಗತಿ. ಆದ್ದರಿಂದ ಸಾರ್ವಜನಿಕರು ವಿದ್ಯುತ್​ ಅವಡ ಸಂಭವಿಸದಂತೆ ಸುರತಾ ಕ್ರಮಗಳಿಗೆ ಆದ್ಯತೆ ನೀಡಬೇಕಿದೆ ಎಂದು ಬೆಸ್ಕಾಂ ಅತ್ತಿಬೆಲೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ರಾಜ್​ ಕುಮಾರ್​ ಸಲಹೆ ನೀಡಿದರು

ಪಟ್ಟಣದಲ್ಲಿ ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ ಅತ್ತಿಬೆಲೆ ಉಪ ವಿಭಾಗ ಮತ್ತು ಸರ್ಜಾಪುರ ಬೆಸ್ಕಾಂನಿಂದ ಬುಧವಾರ ಆಯೋಜಿಸಿದ್ದ ವಿದ್ಯುತ್​ ಸುರತಾ ಸಪ್ತಾಹ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಇಲಾಖೆ ರೂಪಿಸಿರುವ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ವಿದ್ಯುತ್​ ಕಂಬಗಳಿಗೆ ಬ್ಯಾನರ್​ ಆಥವಾ ಜಾಹೀರಾತು ನಾಮಫಲಕ ಕಟ್ಟುವುದನ್ನು ನಿಲ್ಲಿಸಬೇಕು. ಕಂಬಗಳಿಗೆ ತಂತಿ ಕಟ್ಟಿ ಬಟ್ಟೆ ಒಣಗಿಸುವುದು ಮತ್ತು ಜಾನುವಾರುಗಳನ್ನು ಕಟ್ಟುವುದು ಅಪಾಯಕಾರಿ. ಇದರಿಂದಾಗಿ ಹೆಚ್ಚಿನ ವೋಲ್ವೇಜ್​ ಬಂದು ಅಪಘಾತ ಸಂಭವಿಸುತ್ತಿವೆ. ನೆರೆಹೊರೆಯಲ್ಲಿ ಇಂತಹ ಕೆಲಸಗಳು ಕಂಡುಬಂದರೆ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಬೇಕು ಅಥವಾ 1912 ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಎಂದರು.

ಸರ್ಜಾಪುರ ಗ್ರಾಪಂ ಮಾಜಿ ಅಧ್ಯ ಎಸ್​.ವೈ.ಶಂಭಯ್ಯ, ಎಸ್​.ಎಂ.ಶ್ರೀನಿವಾಸ್​, ಎಸ್​.ವಿ.ಶ್ರೀನಿವಾಸ್​, ಬುಡಗಪ್ಪ, ಸುನೀತಾ ಶಶಿಧರ್​, ಅಧ್ಯೆ ಕಲಾವತಿ ಮೂರ್ತಿಕುಮಾರ್​, ಉಪಾಧ್ಯ ಡಾ.ಎಸ್​.ಮಂಜುನಾಥ್​ ಸರ್ಜಾ, ಸದಸ್ಯರಾದ ಎ.ಸತೀಶ್​ ಕುಮಾರ್​, ರೇಣುಕಮ್ಮ, ವೀಣಾ, ಭರತ್​, ಗಣೇಶ್​, ಶಹಾಜನ್​ ಉನ್ನೀಸಾ, ಗ್ರಾಪಂ ಮತ್ತು ಬೆಸ್ಕಾಂ ಸಿಬ್ಬಂದಿ ಇದ್ದರು.

ಜಾಗೃತಿ ಜಾಥಾ : ಸರ್ಜಾಪುರದ ಬೆಸ್ಕಾಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅತ್ತಿಬೆಲೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜ್​ ಕುಮಾರ್​ ವಿದ್ಯುತ್​ ಸುರತೆ ಕುರಿತು ಪ್ರತಿಾವಿಧಿ ಬೋಧಿಸಿದರು. ಜಾಗೃತಿ ಜಾಥಾ ಸರ್ಜಾಪುರದ ಮುಖ್ಯ ಬೀದಿಗಳಲ್ಲಿ ಸಾಗಿ ಸಾರ್ವಜನರಿಗೆ ಕರ ಪತ್ರ ವಿತರಿಸಿ ಅರಿವು ಮೂಡಿಸಲಾಯಿತು.

ಜನರು ನೀರನ್ನು ಕಾಯಿಸಲು ತೆರೆದ ಈಟಿಂರ್​ ಕಾಯಿಲ್​ಗಳನ್ನು ಅಧಿಕ ಸಂಖೆಯಲ್ಲಿ ಬಳಸುತ್ತಿದ್ದು, ಇದರಿಂದ ವಿದ್ಯುತ್​ ಅವಡಗಳು ಹೆಚ್ಚಾಗುತ್ತಿವೆ. ವಿದ್ಯುತ್​ ಕಡಿತವಾದಾಗ ಸ್ಥಳಿಯರು ವಿದ್ಯುತ್​ ಕಂಬ ಏರಿ ದುರಸ್ತಿ ಮಾಡುವುದು ಮತ್ತು ಲೈನ್​ಗಳಿಗೆ ನೇರವಾಗಿ ವೈರ್​ ಹಾಕಿ ವಿದ್ಯುತ್​ ಕಳ್ಳತನ ಮಾಡುವುದು ಅಪರಾಧವಾಗಿದೆ. > ಮೊಹನ್​ ಕುಮಾರ್​ ಸರ್ಜಾಪುರ ಬೆಸ್ಕಾಂ ಸಹಾಯಕ ಅಭಿಯಂತ