ರಾಮದುರ್ಗ: ಜನಪದ ಸಾಹಿತ್ಯ ಮತ್ತು ಸಂಸತಿ ಮಾನವನ ಜೀವನಾಡಿ. ಹೀಗಾಗಿ ಮನುಕುಲದ ಮೇಲೆ ಹೆಚ್ಚು ಪ್ರಭಾವ ಬಿರುತ್ತವೆ ಎಂದು ಸಾಹಿತಿ ಶ್ರೀಕಾಂತ ಕೆಂದೂಳಿ ಹೇಳಿದರು.
ಪಟ್ಟಣದ ಸಿ.ಎಸ್.ಬೆಂಬಳಗಿ ಕಲಾ, ಶಾ.ಎಂ.ಆರ್.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿ.ಎಂ.ಜಗತಾಪ ದತ್ತಿನಿಧಿ, ಕರ್ನಾಟಕ ಸಂ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಪದ ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿ.ಎಂ.ಜಗತಾಪ ಮಾತನಾಡಿ, ಜನಪದ ಸಾಹಿತ್ಯ, ಕಲೆಗಳು ನಾಡಿನ ಸಂಸತಿ ಪ್ರತಿಕವಾಗಿದ್ದು, ಇಂದಿಗೂ ಜನ ಸಮುದಾಯಕ್ಕೆ ಮಾರ್ಗದರ್ಶಿಯಾಗಿವೆ ಎಂದರು.
ವಿದ್ಯಾಪ್ರಸಾರಕ ಸಮಿತಿ ಅಧ್ಯ ಎಸ್.ಎಸ್.ಸುಲ್ತಾನಪುರ, ಕರ್ನಾಟಕ ಸಂದ ಕಾರ್ಯಾಧ್ಯ ಡಾ.ಎಚ್.ಪಿ.ಹಾಲೊಳ್ಳಿ ಮಾತನಾಡಿದರು. ಗೌರವ ಡಾಕ್ಟರೇಟ್ ಪದವಿ ಪುರಸತ ಸಾಲಹಳ್ಳಿಯ ಜನಪದ ಕಲಾವಿದೆ ಲ$್ಮಬಾಯಿ ನೀಲಪ್ಪನವರ ಹಾಗೂ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು. ಗೌರವ ಕಾರ್ಯದರ್ಶಿ ಆರ್.ಪಿ.ಜಗತಾಪ, ಸದಸ್ಯರಾದ ಡಾ.ವೈ.ಬಿ.ಕುಲಗೋಡ, ಟಿ. ದಾಮೋದರ ಇತರರಿದ್ದರು. ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ ಸ್ವಾಗತಿಸಿದರು. ಮಂಜುಳಾ ಮೂಡ್ಲವರ, ಸರೋಜಾ ಆಲಗುಂಡಿ ನಿರೂಪಿಸಿದರು.
ಎಸ್.ಐ. ಮಳಗಲಿ ವಂದಿಸಿದರು