ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಕೊಡಗು ಜಾನಪದ ಪರಿಷತ್ ಸಹಯೋಗದಲ್ಲಿ ೪ನೇ ವರ್ಷದ ಜಾನಪದ ದಸರಾವನ್ನು ಸೆ.೨೯ ರಂದು ಸೋಮವಾರ ಆಯೋಜಿಸಲಾಗಿದೆ ಎಂದು ಜಾನಪದ ದಸರಾ ಸಂಚಾಲಕ ಎಚ್.ಟಿ.ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.೨೯ ರಂದು ಸೋಮವಾರ ಬೆಳಗ್ಗೆ ೧೦ ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ಕಲಾ ಪ್ರದರ್ಶನಗಳು ಆಯೋಜಿಸಲ್ಪಟ್ಟಿವೆ. ಇದೇ ಸಂದರ್ಭ ಜಾನಪದ ವಸ್ತು ಪ್ರದರ್ಶನ, ಕಲಾಜಾಥಾ ಕೂಡ ಜರುಗಲಿದೆ ಎಂದು ತಿಳಿಸಿದ್ದಾರೆ.
ಜಾನಪದ ದಸರಾ ಸಂದರ್ಭ ಕೊಡಗಿನ ಜಾನಪದ ಕಲಾವಿದರಿಗೆ ವೈವಿಧ್ಯಮಯ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಡಗಿನ ಜಾನಪದ ಕಲಾತಂಡಗಳು, ಕಲಾವಿದರು ಜಾನಪದ ದಸರಾ ಸಂದರ್ಭ ನೀಡಲು ಇಚ್ಚಿಸುವ ಪ್ರದರ್ಶನದ ಬಗ್ಗೆ ತಮ್ಮ ಹೆಸರನ್ನು ಸೆ.೨೦ ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಜಾನಪದ ದಸರಾದಲ್ಲಿ ಕಲಾ ಪ್ರದರ್ಶನ ನೀಡಲಿಚ್ಚಿಸುವ ಕಲಾವಿದರು, ಕಲಾತಂಡಗಳು ಸೆ.೨೦ ರೊಳಗಾಗಿ ಅರ್ಜಿಗಳನ್ನು ತಲುಪಿಸಬೇಕು. ಜಾನಪದ ದಸರಾ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ೯೮೮೬೧೮೧೬೧೩, ೯೪೪೮೬೧೪೯೯೯ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.