ಮುರಗೋಡ: ಪ್ರಸ್ತುತ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆ, ಸಂಸತಿ ಹಾಗೂ ಪರಂಪರೆ ಉಳಿವಿಗೆ ನಾವೆಲ್ಲರೂ ಶ್ರಮಿಸೋಣ ಎಂದು ಹಿರಿಯ ಕಲಾವಿದ ಸೋಮಪ್ಪ ಮರಗಾಲ ಹೇಳಿದರು.
ಸಮೀಪದ ಹೀರೆಬೂದನೂರ ಗ್ರಾಮದಲ್ಲಿ ಶ್ರೀ ಗುರು ಡೆಂಗಿ ಸಿದ್ದೇಶ್ವರ ಜಾತ್ರೆ ಅಂಗವಾಗಿ ಕನ್ನಡ ಮತ್ತು ಸಂಸತಿ ಇಲಾಖೆ, ಶ್ರೀ ಮಹಾಲಕ್ಷಿ$್ಮ ಸಾಂಸತಿಕ ಕಲಾ ಹಾಗೂ ಮಹಿಳಾ ಅಭಿವೃದ್ಧಿ ಸಂದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾನಪದ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಪಂ ಉಪಾಧ್ಯ ಶಿವರಾಜ ರುದ್ರಪ್ಪನವರ ಮಾತನಾಡಿದರು.ಕಲಾವಿದ ಹನುಮಂತ ಪಾದಗಟ್ಟಿ ಸಂಗೀತ ಸೇವೆ ನೀಡಿದರು. ಕಮಲಸಾಬ ನದ್ಾ ಗೀಗಿ ಪದ, ಕನ್ನಮ್ಮದೇವಿ ಗಾಯನ ಸಂ ಡೊಳ್ಳಿನ ಪದ, ಚಿದಾನಂದ ಬಡಿಗೇರ ತತ್ತ$್ವಪದ ಪ್ರಸ್ತುತ ಪಡಿಸಿದರು. ದುರ್ಗಪ್ಪ ಗೊಳಿ ಕಣಿವಾದನ ನುಡಿಸಿದರು.
ಶ್ರೀ ರಾಮಲಿಂಗೇಶ್ವರ ನಾಟ್ಯ ಸಂ ಸಂಗ್ಯಾ&ಬಾಳ್ಯಾ ನಾಟಕ ಪ್ರದರ್ಶಿಸಿತು. ಗ್ರಾಪಂ ಸದಸ್ಯರಾದ ಬಾಳೇಶ ಮೆಟಗುಂಪಿ, ಮಂಜುಳಾ ನಾಯ್ಕರ, ಶಿವಬಸವ ನಾಯಕಪ್ಪಗೋಳ, ಮಹಾದೇವಿ ಸುರಣ್ಣವರ, ಬಾಳೇಶ ಸೂರಣ್ಣವರ, ಸಿದ್ದಪ್ಪ ಹೆಗಡೆ, ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸತ ಭರಮಣ್ಣ ಸತ್ಯಣ್ಣವರ, ಬಯಲಾಟ ಅಕಾಡೆಮಿ ಸದಸ್ಯ ಭೀಮಪ್ಪ ಹುದ್ದಾರ, ಮುಖಂಡರಾದ ಸೋಮಪ್ಪ ಮಳಗಲಿ, ದರ್ಯಪ್ಪ ಸೂರಣ್ಣವರ, ತಿಮ್ಮಣ್ಣ ಬಂಡಿವಡ್ಡರ, ಕೀರಪ್ಪ ಮಾಲದಿನ್ನಿ, ಬೀರಪ್ಪ ಕುರುಬರ ಇತರರಿದ್ದರು. ಯಲ್ಲಪ್ಪ ನಾಯ್ಕರ ನಿರೂಪಿಸಿದರು. ಬಿ.ಎಸ್.ನಾಯ್ಕರ ವಂದಿಸಿದರು.