ಜಿಲ್ಲೆ

ಜಾನಪದ ಕೌದಿ ನಮ್ಮ ಸಂಸತಿಯ ಅಸ್ಮಿತೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೌದಿ ಕೇವಲ ಹಾಸಿ ಹೊತ್ತುಕೊಳ್ಳುವ ಹೊದಿಕೆಯಾಗಿರದೆ ಅಜ್ಜನ ಧೋತರ, ಅಪ್ಪನ ಅಂಗಿ, ಅಕ್ಕನ ಗಗ್ಗರಿ ಹೀಗೆ ಎಲ್ಲರ ಸಂಬಂಧಗಳ ಸಾಮರಸ್ಯದ ಬೆಸುಗೆಯಾಗಿದೆ. ಇಡೀ ಕುಟುಂಬದ ಸಂಬಂಧಗಳ ಜೋಡಣೆ ಕೌದಿಯಲ್ಲಿ ಅಡಗಿದೆ. ಜಾನಪದ ಕೌದಿಯು ನಮ್ಮ ಸಂಸ್ಕೃತಿಯ ಅಸ್ಮಿತೆಯಾಗಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇತ್ತೀಚೆಗೆ ಏರ್ಪಡಿಸಿದ್ದ ಡಾ. ಬಸವರಾಜ ಕಲೆಗಾರ ಅವರ ಜಾನಪದ ಕೌದಿಯ ಚಿತ್ತಾರ ಕೃತಿ ಲೋಕಾರ್ಪಣೆ ಹಾಗೂ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ. ಸುಧಾಮೂರ್ತಿ ರಾಷ್ಟ್ರಪತಿಗೆ ಕೌದಿ ಉಡುಗೊರೆ ನೀಡುವ ಮೂಲಕ ಕೌದಿ ಕಲೆಯನ್ನು ಪುನರುಜ್ಜೀವ ಮಾಡುವ, ಕೌದಿ ಕಲೆ ಕಲಾವಿದರನ್ನು ಗೌರವಿಸುವ ಕಾರ್ಯ ಮಾಡಿದ್ದಾರೆ. ಡಾ. ಬಸವರಾಜ ಕಲೆಗಾರ ಚಿತ್ರಕಲಾವಿದರಾಗಿ, ಕವಿಯಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಕ್ರೀಯಾಶೀಲ ಲೇಖಕರಾಗಿ ಚಿತ್ರಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.

ಬಾಬುರಾವ್​ ನಡೋಣಿ, ಶಂಕರ ಹಲಗತ್ತಿ ಮಾತನಾಡಿದರು. ಬಾಳಣ್ಣ ಶೀಗಿಹಳ್ಳಿ ಕೃತಿ ಕುರಿತು ಮಾತನಾಡಿದರು. ಪ್ರೊ. ಶಶಿಧರ ತೋಡಕರ್​ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್​. ದೇಸಾಯಿ, ಬಿ. ಮಾರುತಿ, ಡಾ. ಜಿನದತ್ತ ಹಡಗಲಿ, ಶಶಿ ಸಾಲಿ, ಬಿ.ಎಸ್​.ಶಿರೋಳ, ಕೆ.ಎಚ್​.ನಾಯಕ, ಎನ್​.ಆರ್​. ನಾಯ್ಕರ್​, ಸರಸ್ವತಿ ಪೂಜಾರ, ಪ್ರಕಾಶ ಬಾಳಿಕಾಯಿ, ಡಾ. ಪದ್ಮಾ ಕಲೆಗಾರ, ಶಕುಂತಲಾ ಹಾದಿಮನಿ, ಶಿವಪುತ್ರಪ್ಪ ರಾಚಯ್ಯನವರ, ಬಸವೇಶ ಕುಂಬಾರ, ಇತರರು ಇದ್ದರು.

ವೀರಣ್ಣ ವಡ್ಡೀನ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು.