ಸಿರವಾರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜನಪದ ಉತ್ಸವ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಉಪನ್ಯಾಸಕರನ್ನು ಎತ್ತಿನ ಬಂಡಿಯಲ್ಲಿ ಕರೆತಂದರು. ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಹೀರಾ, ಉಪನ್ಯಾಸಕರಾದ ಡಾ.ಪಾಂಡು, ಲಕ್ಷ್ಮಣ ಯಾದವ್ ಇತರರಿದ್ದರು. 
ಜಿಲ್ಲೆ

ಶ್ರೀಮಂತವಾಗಿದೆ ಜನಪದ ಸಾಹಿತ್ಯ

ಗಾಯತ್ರಿ ಮಾಲಿಪಾಟೀಲ್

ಸಿರವಾರ: ವಿದ್ಯಾರ್ಥಿಗಳು ಜನಪದ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸಕ ಶಿವಯ್ಯ ಹಿರೇಮಠ ಹೇಳಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಪದ ಸಾಹಿತ್ಯ ಶ್ರೀಮಂತವಾಗಿದ್ದು, ಹಿಂದೆ ಅನಕ್ಷಸ್ಥರು ಪದಗಳನ್ನು ಕಟ್ಟಿ ಹಾಡುತ್ತಿದ್ದರು. ಜನಪದ ಸಾಹಿತ್ಯಕ್ಕೆ ಗ್ರಾಮೀಣ ಭಾಗದ ಮಹಿಳೆಯರ ಕೊಡುಗೆ ಅಪಾರ. ಯುವಕರು ಜನಪದ ಹಾಡುಗಳನ್ನು ಕಲಿಯಬೇಕು, ಸಾಹಿತ್ಯ ಓದಬೇಕು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಹೀರಾ, ಉಪನ್ಯಾಸಕರಾದ ಡಾ.ಪಾಂಡು, ಲಕ್ಷ್ಮಣ ಯಾದವ್, ರಾಜಶೇಖರ, ಹನುಮಂತ, ವಿನಯ್ ಶಂಕರ್, ಪದ್ಮಾವತಿ, ಸುಭಾನ್ ಸಾಬ್, ಮೌನೇಶ, ಕಾಶಪ್ಪ ಇತರರಿದ್ದರು.