ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಿರಕ್ತಮಠದಲ್ಲಿ ನಡೆದ ಜಾನಪದ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಶಿವಪ್ರಕಾಶ ಶಿವಾಚಾರ್ಯರು ಹಾಗೂ ಗಣ್ಯರು ಉದ್ಘಾಟಿಸಿದರು. ಸಾಹಿತಿ ಸಿದ್ಧಲಿಂಗ ಮಣೂರ, ಹಿರೇಮಠ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು, ಶಿವಲೀಲಾ ಮುರಾಳ ಇತರರಿದ್ದರು. 
ಜಿಲ್ಲೆ

ಜಾನಪದ ಸಾಹಿತ್ಯ ಸಂಸ್ಕೃತಿಯ ಪ್ರತೀಕ

ಬಸವನಬಾಗೇವಾಡಿ: ಜಾನಪದ ಸಾಹಿತ್ಯ ನಮ್ಮೆಲ್ಲರ ಸಂಸ್ಕೃತಿಯ ಪ್ರತೀಕ. ಜಾನಪದ ಸಾಹಿತ್ಯದ ಮಾಲೀಕರು ಗ್ರಾಮೀಣರು ಎಂದು ಪಟ್ಟಣದ ಹಿರೇಮಠ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಹೇಳಿದರು.

ಮಂಗಳವಾರ ಸಂಜೆ ತಾಲೂಕಿನ ಇಂಗಳೇಶ್ವರ ವಿರಕ್ತಮಠದಲ್ಲಿ ಇಂಗಳೇಶ್ವರ ಉತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ಜಾನಪದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣರ ಬದುಕೆ ಜಾನಪದ ಸಾಹಿತ್ಯವಾಗಿತ್ತು. ಜಾನಪದ ಶತಮಾನಗಳಿಂದ ಬೆಳೆದು ಬಂದಿರುವ ಸಾಹಿತ್ಯ. ಗ್ರಾಮೀಣರ ಸಂಸ್ಕೃತಿ ಅರಿತು ಬದುಕಬೇಕು ಎಂದರು.

ಮನಗೂಳಿಯ ಹಿರೇಮಠ ಅಭಿನವ ಸಂಗನಬಸವ ಶಿವಾಚಾರ್ಯರ ಶ್ರೀಗಳು ಮಾತನಾಡಿ, ಹಿರಿಯರು ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡಿದ ಹಾಡುಗಳೇ ಜಾನಪದ ಸಾಹಿತ್ಯವಾಗಿ ಬೆಳೆದು ಬಂದಿತು ಎಂದರು.

ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಶ್ರೀಗಳು ಮಾತನಾಡಿ, ನಮ್ಮ ಪೂರ್ವಜರು ಅನೇಕ ಸ್ವರಚಿತ ಕವನ ಬರೆದು ಹಾಡಿದ್ದು ಇಂದಿಗೂ ಪ್ರಸ್ತುತ. ಹಂತಿ ಪದ, ಶೋಭಾನ ಪದ, ಗೀಗಿ ಪದ, ಮೊಹರಂ ಪದ, ತೊಟ್ಟಿಲ ಪದ, ಮುಂತಾದ ಹಾಡುಗಳನ್ನು ಹಾಡಿ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ್ದಾರೆ ಎಂದರು.

ಸಾಹಿತಿ ಸಿದ್ಧಲಿಂಗ ಮಣೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯ ರೈತಾಪಿ ಜನರ ಹಾಗೂ ಗ್ರಾಮೀಣ ಗರತಿಯರ ಸಾಹಿತ್ಯ ಮೌಖಿಕವಾಗಿ ಪರಂಪರೆಯಿಂದ ಬೆಳೆದು ಬಂದಿದೆ ಎಂದರು.

ಜಾನಪದ ವಿದ್ವಾಂಸೆ ಶಿವಲೀಲಾ ಮುರಾಳ ಉಪನ್ಯಾಸ ನೀಡಿದರು.

ಸಾಹಿತಿ ಹಾಗೂ ಶಿಕ್ಷಕ ಅಶೋಕ ಹಂಚಲಿ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಕಸಾಪ ತಾಲೂಕ ಅಧ್ಯಕ್ಷ ಶಿವಾನಂದ ಡೋಣೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವೇಂದ್ರ ಗೋನಾಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಹಾರಿವಾಳ, ವಿಶ್ರಾಂತ ಉಪನ್ಯಾಸಕ ಶಿವಪುತ್ರ ಅಂಕದ, ಶಿಕ್ಷಕರಾದ ಬಿ. ಎಚ್. ಬಾರಿಕಾಯಿ, ಕೋಟ್ರೇಶ ಹೆಗಡಿಹಾಳ, ಬಸವರಾಜ ಮೇಟಿ, ಗುರುರಾಜ ಕನ್ನೂರ, ಯಮನಪ್ಪ ಮಿಣಜಗಿ, ಈರಣ್ಣ ಬೆಕಿನಾಳ, ನಿಂಗಪ್ಪ ಬೊಮ್ಮನಳ್ಳಿ, ಗಿರಿಜಾ ಸಜ್ಜನ ಇತರರಿದ್ದರು.