ಜಿಲ್ಲೆ

ಅಕ್ಟೋಬರ್ ೧೯ರಂದು ಜಾನಪದ ಸಂಭ್ರಮ

ಆದರ್ಶ್. ಎಂ.ಕೆ.

ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ನಾಲ್ಕನೇ ದಿನವಾದ ಅ.೧೯ರಂದು ವೈವಿಧ್ಯಮಯ ಕಾರ್ಯಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ ಎಂದು ಜಾನಪದ ದಸರಾ ಸಂಚಾಲಕ ಎಚ್.ಟಿ.ಅನಿಲ್ ತಿಳಿಸಿದ್ದಾರೆ.


ಸಂಜೆ ೬.೩೦ ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಕುಶಾಲನಗದ ಶಾರದಾ ಕಲಾತಂಡದಿಂದ ಜಾನಪದ ವೈವಿಧ್ಯ, ಮಡಿಕೇರಿಯ ಡಾನ್ಸ್ ಲ್ಯಾಬ್ ತಂಡದಿಂದ ನತ್ಯವೈವಿಧ್ಯ, ವಿರಾಜಪೇಟೆಯ ಪ್ರೇಮಾಂಜಲಿ ನಾಟ್ಯ ಮಯೂರಿ ಸಂಸ್ಥೆಯಿಂದ ನತ್ಯ ವೈವಿಧ್ಯ, ಮಡಿಕೇರಿಯ ನಾಟ್ಯ ಕಲಾ ಡಾನ್ಸ್ ಸ್ಟುಡಿಯೋದಿಂದ ನತ್ಯ, ಮಡಿಕೇರಿಯ ಪೊಮ್ಮಕ್ಕಡ ಕೂಟದಿಂದ ನತ್ಯ, ಮಡಿಕೇರಿಯ ಸ್ಪಂದನ ಮಹಿಳಾ ಸಂಘದಿಂದ ನತ್ಯ, ಕೆ.ಪಿ.ಎಸ್.ಬೀಟ್ಸ್ ಕೊಡಗು ಜಿಲ್ಲಾ ಪತ್ರಕರ್ತರ ಸಂಘ(ರಿ) ತಂಡದಿಂದ ಸಂಗೀತ ರಸಮಂಜರಿ ಸೇರಿದಂತೆ ಅನೇಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿದೆ.


ಬೆಳಗ್ಗೆ ೯.೩೦ ಗಂಟೆಯಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಜಾನಪದ ಕಲಾಜಾಥಾ ನಡೆಯಲಿದ್ದು, ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಮಧ್ಯಾಹ್ನ ೨ ಗಂಟೆಯವರೆಗೂ ವೈವಿಧ್ಯಮಯ ಜಾನಪದ ನತ್ಯ, ಗಾಯನ ಕಾರ್ಯಕ್ರಮಗಳು ನಡೆಯಲಿದೆ ಎಂದು ಎಚ್.ಟಿ.ಅನಿಲ್ ತಿಳಿಸಿದ್ದಾರೆ.