ಜಾನಪದ ಕಲೋತ್ಸವ 
ಜಿಲ್ಲೆ

ಪ್ರತಿಭೆ ಅನಾವರಣಕ್ಕೆ ಕಲೋತ್ಸವ ಸಹಕಾರಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಮಕ್ಕಳ ಪ್ರತಿಭೆ ಹೊರತರಲು ಕಲೋತ್ಸವ ಸಹಕಾರಿ ಎಂದು ಶಾಸಕ ದೀರಜ್ ಮುನಿರಾಜು ಹೇಳಿದರು.
ಹೋಬಳಿಯ ಲಕ್ಕಸಂದ್ರದಲ್ಲಿ ಶ್ರೀ ಗುರುರಾಘವೇಂದ್ರ ವಿದ್ಯಾನಿಕೇತನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾನಪದ ಕಲೋತ್ಸವದಲ್ಲಿ ಮಾತನಾಡಿದ ಅವರು, ವರ್ಷವಿಡೀ ಪಾಠದ ಕಡೆ ಗಮನ ಹರಿಸುತ್ತಿದ್ದ ಮಕ್ಕಳ ಮನಸ್ಸುಗಳಿಗೆ ವಾರ್ಷಿಕೋತ್ಸವ ಉಲ್ಲಾಸ ನೀಡಿ, ಅವರ ಶೈಕ್ಷಣಿಕ ಪ್ರಗತಿಗೆ ಪ್ರೇರಣೆಯಾಗುತ್ತದೆ. ಮಕ್ಕಳ ಮನಸ್ಸಿನಲ್ಲಿ ಸ್ತಬ್ಧವಾದ ಕಲೆ ಮತ್ತು ಸಾಂಸ್ಕತಿಕವಾಗಿ ವಿಭಿನ್ನ ಕಲೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದರು.
ಮಕ್ಕಳನ್ನು ದೇಶದ ಒಳ್ಳೆಯ ಪ್ರಜೆಯನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮತ್ತು ಪಾಲಕರ ಮೇಲಿದೆ. ಪಾಲಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾತ್ರವಲ್ಲ, ಮನೆಯಲ್ಲಿಯೂ ಅವರ ಬಗ್ಗೆ ಕಾಳಜಿ ವಹಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂಬುದನ್ನು ಅರಿತು, ಅವರಿಗೆ ಅದನ್ನು ಕಲಿಯಲು ಸ್ವಾತಂತ್ರ ನೀಡಬೇಕು. ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂದರು.
ಶಾಲೆಯ ಕಾರ್ಯದರ್ಶಿ ಎಸ್.ಶೇಷಗಿರಿ ಮಾತನಾಡಿ, ವಿದ್ಯಾರ್ಥಿ ಜೀವನ ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಉತ್ತಮ ಪ್ರಜೆಗಳು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ತೂಬಗೆರೆ ಗ್ರಾಪಂ ಅಧ್ಯಕ್ಷೆ ನಂಜಮ್ಮ ನರಸಿಂಹಮೂರ್ತಿ, ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜ್, ಜಿಪಂ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ, ಶಾಲೆಯ ಕಾರ್ಯದರ್ಶಿ ಶೇಷಗಿರಿ, ನಗರಸಭೆ ಸದಸ್ಯ ವೆಂಕಟೇಶ್, ಹಂಸಪ್ರಿಯಾ ದೇವರಾಜ್, ದೊಡ್ಡತುಮಕೂರು ಗ್ರಾಪಂ ಉಪಾಧ್ಯಕ್ಷ ಮಂಜುನಾಥ್, ಇದ್ದರು.