ಜಿಲ್ಲೆ

ಗ್ರಾಮೀಣ ಭಾಗದಲ್ಲಿ ಜಾನಪದ ಸಂಸ್ಕೃತಿ ಜೀವಂತ

ವಿಜಯವಾಣಿ ಸುದ್ದಿಜಾಲ ಬೈಂದೂರು ರಾಜ್ಯ ಕರಾವಳಿ ಭಾಗವು ಜಾನಪದದ ತವರಾಗಿದ್ದು, ಅನೇಕ ಸಾಧಕರನ್ನು ಹೊಂದಿದ ಪ್ರದೇಶವಾಗಿದೆ. ಈ ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಮೂಲ ಜಾನಪದ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್.ಬಾಲಾಜಿ ಹೇಳಿದರು. ಹಾಲಾಡಿ ರಾಜೀವ್ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಅಂಗ ಸಂಸ್ಥೆ ಜಾನಪದ ಯುವ ಬ್ರಿಗೇಡ್ ಉಡುಪಿ ಜಿಲ್ಲಾ ಟಕ ಉದ್ಘಾಟಿಸಿ ವಾತನಾಡಿದರು. ಹಾಲಾಡಿ ಗ್ರಾಪಂ ಅಧ್ಯಕ್ಷ ಅಶೋಕ ಶೆಟ್ಟಿ ವಾತನಾಡಿ, ನಶಿಸಿಹೋಗುವ ಜಾನಪದ ಕಲೆಗಳನ್ನು ಪುನರ್ಜೀವ ಕೊಡುವ ಕಾರ್ಯ ಜಾನಪದ ಯುವ ಬ್ರಿಗೇಡ್ ಮೂಲಕ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕನ್ನಡ ಜಾನಪದ ಪರಿಸರ ರಾಜ್ಯ ಮಹಿಳಾ ಟಕ ಸಂಚಾಲಕಿ ಡಾ.ಭಾರತಿ ಮರವಂತೆ ಮಾತನಾಡಿದರು. ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾಗಿ ವಿನಯ್, ಸಹ ಸಂಚಾಲಕರಾಗಿ ಶರತ್ ಪೂಜಾರಿ, ಬೈಂದೂರು ಸಂಚಾಲಕರಾಗಿ ದರ್ಶನ್ ಪೂಜಾರಿ, ಸ್ವಸ್ತಿಕ್ ಭಂಡಾರಿ, ಪ್ರಕೃತಿ ಸಾಲಿಗ್ರಾಮ, ಸೌಪರ್ಣಿಕಾ ಪದವಿ ಸ್ವೀಕರಿಸಿದರು. ಸಾಹಿತಿ ಮಂಜುನಾಥ ಕಾಮತ್, ಗ್ರಾಪಂ ಸದಸ್ಯರಾದ ಗುರುಪ್ರಸಾದ ಶೆಟ್ಟಿ, ಜನಾರ್ದನ ಹಾಲಾಡಿ, ಪುನೀತ್ ಪೂಜಾರಿ, ಉಪನ್ಯಾಸಕರಾದ ಪ್ರಕಾಶ್, ಚಂದ್ರಶೇಖರ, ಗಣಪತಿ ಹೆಗಡೆ, ಕಲಾವಿದ ಗುಂಡು ಪೂಜಾರಿ, ಜಾನಪದ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಅಭಿ ಶೆಟ್ಟಿ, ಕರಾವಳಿ ವಿಭಾಗ ಸಂಚಾಲಕ ಸಂದೇಶ್ ನಾಯಕ, ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಸಂಪತ್ ಕುವಾರ್ ಇದ್ದರು.