ಕಂಪ್ಲಿಯಲ್ಲಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಿತು. ಶಾಸಕ ಜೆ.ಎನ್.ಗಣೇಶ, ಪ್ರಮುಖರಾದ ಜಿ.ಜಿ.ಚಂದ್ರಣ್ಣ, ಬಿ.ನಾರಾಯಣಪ್ಪ, ಬಿ.ಬೀರಲಿಂಗೇಶ್ವರ, ಎ.ಎಂ.ಬಸವರಾಜ ಇತರರಿದ್ದರು. 
ಜಿಲ್ಲೆ

ಪಟ್ಟುಗಳನ್ನು ಚಲಾಯಿಸಲು ಯುಕ್ತಿಯೂ ಅಗತ್ಯ

ರುದ್ರಪ್ಪ ವಾಲಿ

ಕಂಪ್ಲಿ: ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಗಳು ಇಲ್ಲಿನ ಕಲ್ಮಠ ಶ್ರೀಪ್ರಭುಸ್ವಾಮಿಗಳ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ನಡೆದವು.

ಶಾಸಕ ಜೆ.ಎನ್.ಗಣೇಶ್ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ, ನಿರಂತರ ಕಠಿಣ ಪರಿಶ್ರಮದಿಂದ ಕುಸ್ತಿ ಕಲೆ ಸಿದ್ಧಿಸಲು ಸಾಧ್ಯ. ಕೇವಲ ಶಕ್ತಿಯಿದ್ದರೆ ಸಾಲದು ಪಟ್ಟುಗಳನ್ನು ಚಲಾಯಿಸಲು ಯುಕ್ತಿಯೂ ಅಗತ್ಯ. ಬಾಲ್ಯದಿಂದಲೇ ಕುಸ್ತಿ ಕಲೆ ಕಲಿಯುವಲ್ಲಿ ಮುಂದಾಗಬೇಕು ಎಂದರು.

ರಾಜ್ಯಕ್ಕೆ ಆಯ್ಕೆ: 14ವರ್ಷದೊಳಗಿನ ಬಾಲಕರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 35ಕೆಜಿ ವಿಭಾಗದಲ್ಲಿ ತೆಕ್ಕಲಕೋಟೆಯ ಎನ್.ಶಿವಬುಜ್ಜಿ, 38ಕೆಜಿ ವಿಭಾಗದಲ್ಲಿ ತೆಕ್ಕಲಕೋಟೆಯ ಬಿ.ಹುಸೇನಪ್ಪ, 48ಕೆಜಿ ವಿಭಾಗದಲ್ಲಿ ಕಂಪ್ಲಿಯ ಎ.ಮಂಜುನಾಥ, 14ವರ್ಷದೊಳಗಿನ ಬಾಲಕಿಯರ ಫ್ರೀಸ್ಟೈಲ್‌ನಲ್ಲಿ 33ಕೆಜಿ ವಿಭಾಗದಲ್ಲಿ ಕಂಪ್ಲಿ ರಿಹಾನ ಫಾತಿಮಾ, 42 ಕೇಜಿ ವಿಭಾಗದಲ್ಲಿ ಹುಸೇನ್‌ಬಾನು, 17ವರ್ಷದೊಳಗಿನ ಬಾಲಕರ ಫ್ರೀಸ್ಟೈಲ್‌ನಲ್ಲಿ 45ಕೆಜಿ ವಿಭಾಗದಲ್ಲಿ ಬಳ್ಳಾರಿಯ ಪೆರುಮಳ್, 48ಕೆಜಿ ವಿಭಾಗದಲ್ಲಿ ಕಂಪ್ಲಿಯ ಎಚ್.ಖಾದರ್‌ವಲಿ, 51ಕೆಜಿ ವಿಭಾಗದಲ್ಲಿ ತೆಕ್ಕಲಕೋಟೆ ಎ.ಅಂಬಣ್ಣ, 55ಕೆಜಿ ವಿಭಾಗದಲ್ಲಿ ಕಂಪ್ಲಿ ಶರ್ಮಾಸ್, 60ಕೆಜಿ ವಿಭಾಗದಲ್ಲಿ ಬಳ್ಳಾರಿ ನಿತೀಶ್, 71ಕೆಜಿ ವಿಭಾಗದಲ್ಲಿ ಕಂಪ್ಲಿ ಕೆ.ಪ್ರವೀಣ, 80ಕೆಜಿ ವಿಭಾಗದಲ್ಲಿ ಕಂಪ್ಲಿ ಪಿ.ಪರಮೇಶ, 92ಕೆಜಿವಿಭಾಗದಲ್ಲಿ ಬಳ್ಳಾರಿ ಭರತ್, 17ವರ್ಷದೊಳಗಿನ ಬಾಲಕಿಯರ ಫ್ರೀಸ್ಟೈಲ್‌ನಲ್ಲಿ 40ಕೆಜಿ ವಿಭಾಗದಲ್ಲಿ ಕಂಪ್ಲಿ ಪ್ರಿಯದರ್ಶಿನಿ, 43ಕೆಜಿ ವಿಭಾಗದಲ್ಲಿ ಕಂಪ್ಲಿ ವಿ.ಭಾಗ್ಯಾ, 46ಕೆಜಿ ವಿಭಾಗದಲ್ಲಿ ಕಂಪ್ಲಿ ಯಲ್ಲಮ್ಮ, 49ಕೆಜಿ ವಿಭಾಗದಲ್ಲಿ ಕಂಪ್ಲಿ ಬಿ.ತೇಜಸ್ವಿನಿ, 57ಕೆಜಿ ವಿಭಾಗದಲ್ಲಿ ಕಂಪ್ಲಿ ಯು.ಮಹಾಲಕ್ಷ್ಮೀ, 61ಕೆಜಿ ವಿಭಾಗದಲ್ಲಿ ಕಂಪ್ಲಿ ರೇಣುಕಮ್ಮ, 17ವರ್ಷದೊಳಗಿನ ಬಾಲಕರ ಗ್ರೀಕೋ ರೋಮನ್‌ನಲ್ಲಿ 45ಕೆಜಿ ವಿಭಾಗದಲ್ಲಿ ಬಳ್ಳಾರಿಯ ಕೆ.ಮಾರುತಿ, 48ಕೆಜಿ ವಿಭಾಗದಲ್ಲಿ ಕಂಪ್ಲಿ ಬಿ.ಕುಮಾರ್, 51ಕೆಜಿ ವಿಭಾಗದಲ್ಲಿ ಕಂಪ್ಲಿ ಕೆ.ರಾಜಾ, 71ಕೆಜಿ ವಿಭಾಗದಲ್ಲಿ ಕಂಪ್ಲಿ ಗಣೇಶ, ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಕುಸ್ತಿಗೆ ಆಯ್ಕೆಗೊಂಡರು.

ಶ್ರೀ ಗುರುಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಜಿ.ಜಿ.ಚಂದ್ರಣ್ಣ, ಡಿಪಿಇಒ ಸಿ.ಕೊಟ್ರೇಶ, ಕ್ರೀಡಾ ಅಧ್ಯಕ್ಷ ಮುಖ್ಯಶಿಕ್ಷಕ ಎ.ಎಂ.ಬಸವರಾಜ, ಪ್ರಮುಖರಾದ ಬಿ.ನಾರಾಯಣಪ್ಪ, ಎಲ್.ರಾಮನಾಯ್ಡು, ಭಾರತೀಶ ಸ್ವಾಮಿ, ದೈಹಿಕ ಶಿಕ್ಷಕರಾದ ಬಿ.ಬೀರಲಿಂಗೇಶ್ವರ, ಮೌಲಾನ್ ಬೀ, ಲಕ್ಷ್ಮೀಕಾಂತ ಬಣಕಾರ, ಆನಂದ್, ಅಬ್ದುಲ್ ಅಜೀಜ್, ಆರ್.ವೆಂಕಟರಮಣ, ವಿ.ರಮೇಶ, ವಿಷ್ಣು ಇತರರಿದ್ದರು.