ಪುತ್ತೂರು ಗ್ರಾಮಾಂತರ: ದ.ಕ.ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟ ಹಾಗೂ ಬಡಗನ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಪಶು ಮೇವು ಬೆಳೆಯ ಪ್ರಾತ್ಯಕ್ಷಿಕೆ ಮತ್ತು ಒಕ್ಕೂಟ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಬಡಗನ್ನೂರು ಗ್ರಾಮದ ಕೊಲದಲ್ಲಿ ನಡೆಯಿತು.
ದ.ಕ ಜಿಲ್ಲಾ ಹಾಲು ಒಕ್ಕೂಟದ ಡಾ.ಸತೀಶ್ ರಾವ್ ಗಿಣಿ ಹುಲ್ಲು ಬೆಳೆಯುವ ವಿಧಾನದ ಬಗ್ಗೆ ಹಾಗೂ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಅವರು ಅಜೋಳ ಬೆಳೆಯುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಬಡಗನ್ನೂರು ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಒಕ್ಕೂಟದ ಮೇಲ್ವಿಚಾರಕಿ ಶ್ರೀದೇವಿ, ತಾಂತ್ರಿಕ ವಿಭಾಗದ ವೇಧಾವತಿ, ಬಡಗನ್ನೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಸುಬ್ರಾಯ ನಾಯಕ್ ಮೇಗಿನಮನೆ, ಹೇಮಲತಾ ಗೌಡ ಸಂಪಿಗೆಮಜಲು, ಸುಧಾ ಜೆ.ಗೌಡ,ಪದ್ಮಾಲತಾ ಯಂ ರೈ ಬಡಕ್ಕಾಯೂರು, ಯಶೋದ ಕೊಲ, ಸದಸ್ಯರಾದ ಶಶಿಧರ ಭಟ್ ಕೊಲ, ರಾಮಕೃಷ್ಣ ಭಟ್ ಸಿ.ಎಚ್., ಸುಬ್ಬಯ್ಯ ರೈ ಹಲಸಿನಡಿ, ಕಿಶೋರ್ ಭಟ್ ಸಿ.ಎಚ್, ನಯನ ರೈ ಬಡಕ್ಕಾಯುರು, ರತ್ನಾವತಿ ಕಳಗಿನ ಪೇರಾಲು, ಈಶ್ವರ ಮೂಲ್ಯ ಕೊಲ, ಪ್ರಾಂಕಿ ಡಿ.ಸೋಜ ಕುದರೆಮಜಲು, ಜಯರಾಮ ಗೌಡ ಮತ್ತಿತರರು ಉಪಸ್ಥಿತರಿದ್ದರು. ಬಡಗನ್ನೂರು ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿ ಮೋಹನ್ ಎಂ.ಸ್ವಾಗತಿಸಿ ವಂದಿಸಿದರು.