ಗಂಗಾವತಿ ಹಿರೇಜಂತಕಲ್ ಮುಡ್ಡಾಣೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಂಕಲ್ಪ ಪದವಿ ಕಾಲೇಜಿನಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ಸೇವಾ ಶಿಬಿರವನ್ನು ವೈದ್ಯೆ ಸಿಂಧು ಕಾರ್ತೀಗೌಡ ಉದ್ಘಾಟಿಸಿದರು. ಪ್ರಾಚಾರ್ಯ ಬಸಪ್ಪ ಶಿರಿಗೇರಿ, ಉಪನ್ಯಾಸಕರಾದ ಶಂಕರ ವರದಾಪುರ, ಎಚ್.ನಾಗರಾಜ್ ಇತರರಿದ್ದರು. 
ಜಿಲ್ಲೆ

ಹಿತ-ಮಿತ ಆಹಾರ ಕ್ರಮಗಳತ್ತ ಗಮನಹರಿಸಿ

ಗಂಗಾವತಿ: ಒತ್ತಡದ ಜೀವನ ಮತ್ತು ತಪ್ಪಾದ ಆಹಾರ ಕ್ರಮದ ಪರಿಣಾಮ ಆರೋಗ್ಯ ಸಮಸ್ಯೆ ಹೆಚ್ಚುತ್ತಿವೆ. ಮಾನಸಿಕ ನೆಮ್ಮದಿಗೆ ಯೋಗ ಮತ್ತು ಧ್ಯಾನಕ್ಕೆ ಮಹತ್ವ ನೀಡಿ ಎಂದು ವೈದ್ಯೆ ಸಿಂಧು ಕಾರ್ತಿಕಗೌಡ ಸಲಹೆ ನೀಡಿದರು.

ನಗರದ ಹಿರೇಜಂತಕಲ್ ಮುಡ್ಡಾಣೇಶ್ವರ ದೇವಾಲಯದ ಸಭಾಂಗಣದಲ್ಲಿ ಸಂಕಲ್ಪ ಪದವಿ ಕಾಲೇಜಿನಿಂದ ಮಂಳವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ಸೇವಾ ಶಿಬಿರದಲ್ಲಿ ಮಾತನಾಡಿದರು. ಆನ್‌ಲೈನ್ ವ್ಯವಹಾರ ಒತ್ತಡ ಜೀವನಕ್ಕೆ ಕಾರಣವಾಗುತ್ತಿದೆ. ಹಣಗಳಿಕೆ ಭರಾಟೆಯಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಲಾಗುತ್ತಿದೆ. ಆರೋಗ್ಯದ ಸಮಸ್ಯೆಗಳಿಂದ ಹೊರ ಬರಲು ಏಕಾಗ್ರತೆ ಮುಖ್ಯ ಆದ್ದರಿಂದ ಯೋಗ, ಧ್ಯಾನ, ಹಿತ-ಮಿತ ಆಹಾರ ಕ್ರಮಗಳತ್ತ ಗಮನಹರಿಸಿ ಎಂದರು.

ಸಂಪನ್ಮೂಲ ವ್ಯಕ್ತಿ ಎಚ್.ಕೆ.ಗೌರಿ, ಪ್ರಾಚಾರ್ಯ ಬಸಪ್ಪ ಶಿರಿಗೇರಿ, ಉಪನ್ಯಾಸಕರಾದ ಶಂಕರ್ ವರದಾಪುರ, ಎಚ್.ನಾಗರಾಜ, ವೈ.ಬಸವರಾಜ, ಕೆ.ಗುರುಮೂರ್ತಿ, ಚನ್ನಬಸವ, ರಮೇಶ್ ಪೂಜಾರ್, ಶಿವಶರಣ, ಉಷಾದೇವಿ, ಎಚ್.ರಮೇಶ್, ಮಂಜುನಾಥ್ ದಾನನಗೌಡ, ಎನ್.ರಾಹುಲ್ ಇತರರಿದ್ದರು.