ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಡೆಂೆ ರೋಗದ ಜಾಗೃತಿ ಕಾರ್ಯಕ್ರಮ ಜರುಗಿತು. ಗ್ರಾ.ಪಂ. ಸದಸ್ಯ ಮಾಂತಯ್ಯ ತಡಸಮಠ, ಪಿಡಿಒ ಎ.ಎಚ್. ಮನಿಯಾರ, ಎಸ್‌ಡಿಎಂಸಿ ಸದಸ್ಯ ಸಹದೇವ ಅಂಗಡಿ, ಮುಖ್ಯ ಶಿಕ್ಷಕಿ ಡಿ.ಎಚ್. ಕೋಟುರ, ಆರ್.ಸಿ. ಹಿರೇಮಠ ಇತರರು ಇದ್ದರು. 
ಜಿಲ್ಲೆ

ಮಕ್ಕಳ ಆಟೋಟದ ಮೇಲಿರಲಿ ಗಮನ

ಸೋಮನಾಥ ರೆಡ್ಡಿ

ಕಲಘಟಗಿ: ಕಲಘಟಗಿ: ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಡೆಂೆ ರೋಗ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.

ಗ್ರಾ.ಪಂ. ಸದಸ್ಯ ಮಾಂತಯ್ಯ ತಡಸಮಠ ಮಾತನಾಡಿ, ‘ಮಳೆಗಾಲದ ಸಂದರ್ಭದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಮಕ್ಕಳು ಸೊಳ್ಳೆ ಇರುವ ಪ್ರದೇಶಗಳಲ್ಲಿ ಆಟ ಆಡುವುದು ಸಂಚರಿಸುವುದು ಮಾಡಬಾರದು’ ಎಂದರು.

ಪಿಡಿಒ ಎ.ಎಚ್. ಮನಿಯಾರ, ಎಸ್‌ಡಿಎಂಸಿ ಸದಸ್ಯ ಸಹದೇವ ಅಂಗಡಿ, ಮುಖ್ಯ ಶಿಕ್ಷಕಿ ಡಿ.ಎಚ್. ಕೋಟುರ, ಆರ್.ಸಿ. ಹಿರೇಮಠ, ಆರ್.ಟಿ ಪರೀಟ್, ಆರ್.ಕೆ. ಪಾಟೀಲ, ಜಿ.ಎಲ್. ಕೇಸ್ರಿ, ಜಿ.ಎಲ್. ರಾಥೋಡ, ಜಿ.ಬಿ. ಕತ್ತಿ, ಎಸ್.ಎ. ಹಿರೇಮಠ, ದತ್ತಾತ್ರೇಯ,್ತ ಜ್ಯೋತಿ, ರವಿ ಜಾಧವ, ರವಿ ಮುಗದ ಇದ್ದರು.