ಜಿಲ್ಲೆ

ಕನ್ನಡಾಂಬೆಗೆ ವಿದ್ಯಾರ್ಥಿಗಳಿಂದ ಪುಷ್ಪಾರ್ಚನೆ

ಅವಿನಾಶ್ ಜೈನಹಳ್ಳಿ

ಮೈಸೂರು: ಮಹಾರತ್ನ ಟ್ರಸ್ಟ್ ವತಿಯಿಂದ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಶೀರ್ಷಿಕೆಯಡಿ ‘ಕನ್ನಡ ಗೀತ ಗಮನ ನಡಿಗೆಯೊಂದಿಗೆ ಗಾಯನ’ ಕಾರ್ಯಕ್ರಮ ನಡೆಯಿತು.

  • ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಕಾರ್ಯಕ್ರಮಕ್ಕೆ ಅತಿಥಿಗಳು ಚಾಲನೆ ನೀಡಿದರು. ಈ ವೇಳೆ ಕನ್ನಡಾಂಬೆ ಮೂರ್ತಿಯುಳ್ಳ ಸ್ತಬ್ಧಚಿತ್ರದೊಡನೆ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕನ್ನಡ ಗೀತೆ, ಜಾನಪದ ಗೀತೆ ಹಾಡುತ್ತ ರಾಮಸ್ವಾಮಿ ವೃತ್ತದ ಮೂಲಕ ನಡಿಗೆಯಲ್ಲಿ ಸಾಗಿ ಮಹಾರಾಣಿ ವಿಜ್ಞಾನ ಕಾಲೇಜು ತಲುಪಿದರು. ವಿದ್ಯಾರ್ಥಿನಿಯರು ಕನ್ನಡಾಂಬೆ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ನಾಡಗೀತೆ ಹಾಡಿದರು.
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಟ್ರಸ್ಟ್ ಅಧ್ಯಕ್ಷ ಮೈಸೂರು ಮಹಾಲಿಂಗು, ಪದಾಧಿಕಾರಿಗಳಾದ ರೂಪಾ, ನಾಗಶ್ರೀ, ಸಂದೇಶ್, ವಿಜಯಶ್ರೀ, ಕೌಸಲ್ಯಾ ಇದ್ದರು.