ಮಧೂರು: ಪರಕ್ಕಿಲ ತರುಣ ಕಲಾವೃಂದ ಉಳಿಯ ನೇತೃತ್ವದಲ್ಲಿ ಸಂಘದ ಸದಸ್ಯೆಯರಿಂದ ಶನಿವಾರ ‘ಓಣಂ ಸಂಭ್ರಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೂವಿನ ರಂಗೋಲಿ ಬಿಡಿಸುವ ಸ್ಪರ್ಧೆ ನಡೆಯಿತು.
ತರುಣ ಕಲಾವೃಂದದ ಅಧ್ಯಕ್ಷ ಸುರೇಶ್ ಯು.ಆರ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸಿದರು. ಉಪಾಧ್ಯಕ್ಷ ಸಂತೋಷ್ ಆರ್.ಗಟ್ಟಿ ಶುಭ ಹಾರೈಸಿದರು.
ಕಲಾ-ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಿತು.
ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ ಶುಭಹಾರೈಸಿದರು. ದೀಪಾ ಕಿರಣ್, ಕಲಾ ಮತ್ತು ಕ್ರೀಡಾ ಕಾರ್ಯದರ್ಶಿ ಶರಣ್ಯಾ ನಾರಾಯಣನ್, ಮೃದುಲಾ ಸುರೇಶ್, ಜಯಲಕ್ಷ್ಮೀ ರಾಜೇಶ್ ಅನಿಸಿಕೆ ಹಂಚಿಕೊಂಡರು. ಸಂಘಟನಾ ಕಾರ್ಯದರ್ಶಿ ಪದ್ಮರಾಜ ಪರಕ್ಕಿಲ ಸ್ವಾಗತಿಸಿದರು. ಬಾಲಕೃಷ್ಣ ಉಳಿಯ ಕಾರ್ಯಕ್ರಮ ನಿರೂಪಿಸಿದರು.