ಕೆರೂರ ಸಮೀಪದ ಬೆಳ್ಳಿಕಿಂಡಿ ಗ್ರಾಮದ ರೈತ ಪರಶುರಾಮ ಘಟ್ನೂರ ಹೊಲದಲ್ಲಿ ಹೂವುಗಳ ನರ್ಸರಿ ಪ್ಲಾಂಟ್‌ನ್ನು ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಸಂತ ಗಾಣಿಗೇರ ಉದ್ಘಾಟಿಸಿದರು. ಪ್ರಾಧ್ಯಾಪಕ ಡಾ. ಸತೀಶ ಪಾಟೀಲ, ರೈತರಾದ ಪರಶುರಾಮ ಘಟ್ನೂರ, ಬಸು ಚಂದರಗಿ, ಮಾರುತಿ ಪಡಿಮನಿ, ಯಲ್ಲಪ್ಪ ತಟ್ಟಿ, ರಾಜು ಹಲಗತ್ತಿ ಇತರರಿದ್ದರು. 
ಜಿಲ್ಲೆ

ಹೂವು ಬೆಳೆಗಾರರ ಸಂಘ ಶೀಘ್ರ ಸ್ಥಾಪನೆ

ಕೆರೂರ: ಈ ಭಾಗದಲ್ಲಿ ಹೂವು ಬೆಳೆಗಾರರು ಸಾಕಷ್ಟು ಜನರಿದ್ದಾರೆ. ಅವರಿಗೆ ಸೂಕ್ತ ಮಾರುಕಟ್ಟೆ ಒದಗಿಸಿಕೊಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ಹೂವು ಬೆಳೆಗಾರರ ಸಂಘ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಸಂತ ಗಾಣಿಗೇರ ಹೇಳಿದರು.

ಇಲ್ಲಿಗೆ ಸಮೀಪದ ಬೆಳ್ಳಿಕಿಂಡಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಪುಷ್ಪ ತಳಿಗಳ ಕುರಿತ ಮಾಹಿತಿ ಹಾಗೂ ರೈತ ಪರಶುರಾಮ ಘಟ್ನೂರ ಅವರ ಹೊಲದಲ್ಲಿ ಹೂವುಗಳ ನರ್ಸರಿ ಪ್ಲಾಂಟ್ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸೇವಂತಿಗೆ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ಬೆಳೆಯಲು ಅನುಕೂಲವಿದೆ. ರೈತರು ಆಧುನಿಕ ಬೇಸಾಯ ಕ್ರಮ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದು ರೈತರಿಗೆ ಸಲಹೆ ನೀಡಿದರು.

ತೋಟಗಾರಿಕೆ ವಿವಿ ಪುಷ್ಪ ವಿಭಾಗದ ಪ್ರಾಧ್ಯಾಪಕ ಡಾ. ಸತೀಶ ಪಾಟೀಲ, ರೈತರಾದ ಪರಶುರಾಮ ಘಟ್ನೂರ, ಬಸು ಚಂದರಗಿ, ಮಾರುತಿ ಪಡಿಮನಿ, ಯಲ್ಲಪ್ಪ ತಟ್ಟಿ, ರಾಜು ಹಲಗತ್ತಿ, ಅರ್ಜುನ ಗಲಗಲಿ, ಚಿದಾನಂದ ನಾಗರಾಳ, ಜಗದೀಶ ಚಂದರಗಿ, ಆನಂದ ಪಡಿಮನಿ ಉಪಸ್ಥಿತರಿದ್ದರು.