ಹೂವಿನಹಡಗಲಿಯಲ್ಲಿ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆ ಹಾಗೂ ಗ್ರಾಮೀಣ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೌರಕಾರ್ಮಿಕ ಮಹಿಳೆ ಎಂಟುಮನಿ ಮಲ್ಲಮ್ಮ ಉದ್ಘಾಟಿಸಿದರು. ಎಎಂಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷ ಎಎಂಪಿ ವಾಗೀಶ್, ಮುಖ್ಯ ವೈದ್ಯಾಧಿಕಾರಿ ಕೊಟ್ರಮ್ಮ ಶಿಕ್ಷಕಿ ಎಂ.ಕವಿತಾ ಇತರರಿದ್ದರು. 
ಜಿಲ್ಲೆ

ಮಹಿಳೆಯರು ಗುಣಮಟ್ಟದ ಆಹಾರ ಸೇವಿಸಲಿ

ಹೂವಿನಹಡಗಲಿ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸುತ್ತಿದ್ದಾರೆ ಎಂದು ಸರ್ಕಾರಿ ಆಯುಷ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಕೊಟ್ರಮ್ಮ ಹೇಳಿದರು.

ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಎಎಂಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್‌ನ 8ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆ ಹಾಗೂ ಗ್ರಾಮೀಣ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರದಲ್ಲಿ ಮಾತನಾಡಿದರು. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಮಹಿಳೆಯರು ಅನೇಕ ಒತ್ತಡಗಳಿಂದ ಬಳಲುತ್ತಿದ್ದು, ಗುಣಮಟ್ಟದ ಆಹಾರ ಸೇವಿಸುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದರು.

ಡಾ.ರಶ್ಮಿ ನಿಖಿಲ್ ಮಾತನಾಡಿ, ಮಹಿಳೆಯರು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೌರಕಾರ್ಮಿಕ ಮಹಿಳೆ ಎಂಟುಮನಿ ಮಲ್ಲಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೃತ್ತಿ ರಂಗಭೂಮಿ ಕಲಾವಿದೆ ಸೋಗಿ ನಾಗರತ್ನಮ್ಮ, ವಕೀಲೆ ಕೆ.ಕವಿತಾ ಮಹೇಶ, ಟ್ರಸ್ಟ್‌ನ ಅಧ್ಯಕ್ಷ ಎಎಂಪಿ ವಾಗೀಶ್, ಯೋಧ ಟಿ.ಸಂಗಪ್ಪ, ರೈತ ಮಹಿಳೆ ವೈ.ಅಕ್ಕಮಹಾದೇವಿ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇತರರಿದ್ದರು.