ಲಿಂಗಸುಗೂರಿನಲ್ಲಿ ಎಂಎಲ್‌ಸಿ ಶರಣಗೌಡ ಪಾಟೀಲ್ ಬಯ್ಯಪುರಗೆ ನಂದವಾಡಗಿ ಏತನೀರಾವರಿ ಹೋರಾಟ ಸಮಿತಿಯ ಪ್ರಮುಖರು ಮನವಿ ಸಲ್ಲಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಬಸವಂತರಾಯ ಕುರಿ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಮುರಾರಿ, ತಾಂತ್ರಿಕ ಸಮಿತಿ ಅಧ್ಯಕ್ಷ ಶರಣಗೌಡ ಬಸಾಪುರ, ಕಾರ್ಯದರ್ಶಿ ರಮೇಶ ಶಾಸ್ತ್ರಿ, ಪ್ರಮುಖರಾದ ಮಲ್ಲೇಶಗೌಡ ಮಟ್ಟೂರು, ಆದನಗೌಡ ಸಂತೆಕೆಲ್ಲೂರು, ಡಿ.ಜಿ.ಗುರಿಕಾರ, ಶಶಿಧರ ಪಾಟೀಲ್, ಚನ್ನಾರಡ್ಡಿ ಬಿರಾದಾರ ಇತರರಿದ್ದರು. 
ಜಿಲ್ಲೆ

ಹರಿ ನೀರಾವರಿ ಕಲ್ಪಿಸಲು ಕ್ರಮವಹಿಸಿ

ರುದ್ರಪ್ಪ ವಾಲಿ

ಲಿಂಗಸುಗೂರು:ರಾಜ್ಯದ ಅನೇಕ ಹನಿ ನೀರಾವರಿ ಯೋಜನೆಗಳು ವಿಫಲವಾಗಿದ್ದು, ನಂದವಾಡಗಿ ಏತನೀರಾವರಿ ಯೋಜನೆ ಹನಿ ನೀರಾವರಿ ಬದಲು ಪೈಪ್ ಮೂಲಕ ಹರಿ ನೀರಾವರಿ ಕಾಮಗಾರಿಯಾಗಿ ಪರಿವರ್ತಿಸಬೇಕು ಎಂದು ನಂದವಾಡಗಿ ಏತನೀರಾವರಿ ಹೋರಾಟ ಸಮಿತಿ ಪ್ರಮುಖರು ಎಂಎಲ್‌ಸಿ ಶರಣಗೌಡ ಪಾಟೀಲ್ ಬಯ್ಯಪುರಗೆ ಮಂಗಳವಾರ ಮನವಿ ಸಲ್ಲಿಸಿದರು.

2017ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಯೋಜನಾ ಕಾಮಗಾರಿಗೆ ಚಾಲನೆ ನೀಡಿ 2,100 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆದು 2021ರ ವೇಳೆಗೆ ಜಮೀನಿಗೆ ನೀರು ತಲುಪಿಸುವ ಸಂಕಲ್ಪ ಹೊಂದಲಾಗಿತ್ತು.

ಈಗಾಗಲೇ ಶೇ. 90 ಕಾಮಗಾರಿ ಪೂರ್ಣಗೊಂಡರೂ ಇಂದಿಗೂ ನೀರು ಹರಿಸಲು ಸಾಧ್ಯವಾಗಿಲ್ಲ. ರಾಜ್ಯದ ಇತರೆ ಪ್ರದೇಶ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ಮರೋಳ, ಶಿಗ್ಗಾವಿ, ಮುಳವಾಡ ಹನಿ ನೀರಾವರಿ ಯೋಜನೆಗಳು ರೈತರ ಕನಸನ್ನು ಛಿದ್ರಗೊಳಿಸಿವೆ. ಕಾರಣ ಹನಿ ನೀರಾವರಿ ಬದಲಾಗಿ ಹರಿ ನೀರಾವರಿಯಾಗಿ ಪರಿವರ್ತಿಸಿ ಪ್ರತಿ ಹೆಕ್ಟೇರ್‌ಗೆ ತೂಬು ಮೂಲಕ ಕೃಷಿ ಹೊಂಡ ನಿರ್ಮಿಸಿ ಸೋಲಾರ್ ಪಂಪ್‌ಸೆಟ್‌ಗಳನ್ನು ಒದಗಿಸಿ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.