ಆನಂದ ಮತ್ತಿಗಟ್ಟಿ ಸವಣೂರ
ಜಿಲ್ಲೆಯ ಗಡಿ ಗ್ರಾಮ, ಸವಣೂರ ತಾಲೂಕಿನ ಕಟ್ಟಕಡೆಯ ಹೂವಿನಶಿಗ್ಲಿಯು ಲಿಂ. ಶ್ರೀ ನಿರಂಜನ ಸ್ವಾಮೀಜಿಗಳ ಸಾಮಾಜಿಕ ಕಾರ್ಯಗಳಿಂದ ಪ್ರಖ್ಯಾತಗೊಂಡಿದೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಹಿಂದುಳಿದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಎಂದು ಬಿಂಬಿತವಾಗಿರುವ ಈ ಗ್ರಾಮ ಹಾವೇರಿ ವಿಧಾನಸಭೆ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿದೆ.
ಯಲವಗಿಯಿಂದ ಹೂವಿನಶಿಗ್ಲಿ ಮಾರ್ಗವಾಗಿ ಗದಗ ಜಿಲ್ಲೆ ಲಕ್ಷೆ್ಮೕಶ್ವರ ತಾಲೂಕಿನ ಸಂತೆಶಿಗ್ಲಿ ಗ್ರಾಮದ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಗ್ರಾಮದ ವಿರಕ್ತಮಠದ ಹತ್ತಿರದಲ್ಲಿರುವ ಕೆರೆ ತುಂಬಿ ನಿರಂತರವಾಗಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ರಸ್ತೆಯಲ್ಲಿರುವ ಸಿಡಿ (ನೆಲಸಮದ ಬ್ರಿಜ್) ಪುರಾತನವಾಗಿರುವ ಕಾರಣ ವಾಹನಗಳು ಸದಾ ಬ್ರಿಜ್ ಮೇಲೆ ನಿಂತಿರುವ ನೀರಿನಲ್ಲಿ ಹಾಯ್ದು ಹೋಗುವುದು ಅನಿವಾರ್ಯವಾಗಿದೆ. ಕೆರೆಯ ನೀರು ಮುಂದಕ್ಕೆ ಹರಿಯದೇ ಇರುವುದರಿಂದ ರೈತರು, ಪ್ರಯಾಣಿಕರು ಜೀವಭಯದಲ್ಲೇ ರಸ್ತೆ ದಾಟುತ್ತ, ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಿಡಬ್ಲ್ಯುಡಿ ಹಾಗೂ ಪಿಆರ್ಇಡಿ ಮಧ್ಯೆ ರಸ್ತೆ ಹಾಗೂ ಬ್ರಿಜ್ (ಸಿಡಿ) ನಿರ್ಮಾಣ ಕುರಿತು ಗೊಂದಲವಾಗಿದೆ. ಸವಣೂರ ತಾಲೂಕಿನ (ಹತ್ತಿಮತ್ತೂರ ಹೋಬಳಿ, ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ) ಬಹುತೇಕ ಗ್ರಾಮಗಳನ್ನು ಸಂರ್ಪಸುವ ಮುಖ್ಯರಸ್ತೆ ಹಾಗೂ ಸಿಡಿ (ಬ್ರೀಜ್) ನಿರ್ವಣಗೊಳ್ಳಬೇಕಿದೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಹೂವಿನಶಿಗ್ಲಿ ಬ್ರಿಜ್ ಹಾಗೂ ರಸ್ತೆ ನಿರ್ಮಾಣ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. 2016-17ನೇ ಸಾಲಿನಲ್ಲಿ ಸುಮಾರು 1 ಕೋಟಿ 40 ಲಕ್ಷ ರೂ.ಗಳಲ್ಲಿ ಯಲವಿಗಿಯಿಂದ ಹೂವಿನಶಿಗ್ಲಿ ರಸ್ತೆ ನಿರ್ವಿುಸಲಾಗಿದೆ. ಆದರೆ, ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದರಿಂದ ಸವಾರರು ಸಂಚರಿಸಲೂ ಸಾಧ್ಯವಾಗದ ಸ್ಥಿತಿ ಉಂಟಾಗಿದೆ.
ರಸ್ತೆ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯರಸ್ತೆಗಳಿಗೆ ಗಟಾರವಿಲ್ಲ. ಹೀಗಾಗಿ ಕೊಳಚೆ ನೀರು ಮುಖ್ಯರಸ್ತೆಯ ಮೇಲೆಯೇ ಹರಿಯುತ್ತದೆ. ಗ್ರಾಮ ಪಂಚಾಯಿತಿ ಎದುರಲ್ಲೇ ಗಟಾರ ನಿರ್ವಣವಾಗದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಹೂವಿನಶಿಗ್ಲಿ ಹಾಗೂ ಸಂತೆಶಿಗ್ಲಿ ಸಂಪರ್ಕ ರಸ್ತೆಯಲ್ಲಿ ಬರುವ ಬ್ರಿಜ್ ನಿರ್ವಣಕ್ಕೆ ಪ್ರತ್ಯೇಕ 50 ಲಕ್ಷ ಅನುದಾನ ಹಾಗೂ ರಸ್ತೆ ನಿರ್ವಣಕ್ಕೆ 2.25 ಕೋಟಿ ರೂ. ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಲೋಕೋಪಯೋಗಿ ಹಾಗೂ ಪಂಚಾಯತ್ರಾಜ್ ಇಂಜನಿಯರಿಂಗ್ ಇಲಾಖೆ ಜಂಟಿಯಾಗಿ ಕಾರ್ಯ ಕೈಗೊಳ್ಳಬೇಕಿರುವ ಹಿನ್ನಲೆಯಲ್ಲಿ ಅನುದಾನ ಬಿಡುಗಡೆ ಸಮಯ ತೆಗೆದುಕೊಳ್ಳುತ್ತಿದೆ. ಕೂಡಲೆ ಕಾಮಗಾರಿಗೆ ಚಾಲನೆ ನೀಡಲು ಯೋಜನೆ ರೂಪಿಸಲಾಗುವುದು.| ಜಿ.ಎಚ್.ಭಜಂತ್ರಿ,ಪಿಆರ್ಇಡಿ ಎಇಇಕೋಟ್ಹೂವಿನಶಿಗ್ಲಿ ಬ್ರಿಜ್ ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ರಸ್ತೆ ನಿರ್ವಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಬ್ರಿಜ್ ನಿರ್ಮಾಣ ಕುರಿತು ಸ್ಥಳ ಪರಿಶೀಲಿಸಿ, ಕೂಡಲೆ ವರದಿ ಸಲ್ಲಿಸಿ ಅನುದಾನ ಪಡೆದು ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗುತ್ತದೆ.| ಮಾಲತೇಶ ಪಿ.,ಪಿಡಬ್ಲ್ಯುಡಿ ಎಇಇಯಲವಿಗಿಯಿಂದ ಹೂವಿನಶಿಗ್ಲಿ ಗ್ರಾಮದ ರಸ್ತೆ ನಿರ್ಮಾಣ ಹಾಗೂ ಬ್ರಿಜ್ ನಿರ್ವಣಕ್ಕೆ ಸುಮಾರು 2 ಕೋಟಿ ರೂ. ಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ. ಟೆಂಡರ್ ಕರೆದು ಕಾಮಗಾರಿ ಆರಂಭಿಸುವುದು ಬಾಕಿ ಇದೆ.ಶೇಖಪ್ಪ ನಿಂಗಪ್ಪ ಆಡಿನಸ್ಥಳೀಯ ಗ್ರಾಪಂ ಸದಸ್ಯಪ್ರತಿ ವರ್ಷ ಗ್ರಾಮದಲ್ಲಿ ಜರುಗುವ ಶ್ರೀ ನಿರಂಜನ ಸ್ವಾಮೀಜಿ ಸ್ಮರಣೋತ್ಸವ ಹಾಗೂ ವಿರಕ್ತಮಠದ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಜನಪ್ರತಿನಿಧಿಗಳು ಹತ್ತಾರು ವರ್ಷಗಳಿಂದ ರಸ್ತೆ ಹಾಗೂ ಬ್ರಿಜ್ ನಿರ್ವಣದ ಬಗ್ಗೆ ಕೇವಲ ಭರವಸೆ ನೀಡಿ, ಶ್ರೀಮಠದ ಸನ್ಮಾನ ಸ್ವೀಕರಿಸಿ ತೆರಳುತ್ತಾರೆ. ಆದರೆ, ಕಾಮಗಾರಿ ಮಾತ್ರ ಆರಂಭವಾಗುತ್ತಿಲ್ಲ. ಈ ಕುರಿತು ಹೋರಾಟ ಅನಿವಾರ್ಯವಾಗಲಿದೆ.| ಹನುಮಂತಪ್ಪ ಗುಡಗೇರಿ,ಹೂವಿನಶಿಗ್ಲಿ ಗ್ರಾಮಸ್ಥ