ಮೈಸೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಗಾಯತ್ರಿ ಪುರಂ ಸೇವಾಕೇಂದ್ರದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಸೀತಾಲಕ್ಷ್ಮೀ ಅವರಿಗೆ ಹುಣಸೂರು ರಸ್ತೆಯಲ್ಲಿರುವ ರಾಜಯೋಗ ರಿಟ್ರೀಟ್ ಕೇಂದ್ರದಲ್ಲಿ ಸೋಮವಾರ ಪುಷ್ಪ ನಮನ ಸಲ್ಲಿಸಲಾಯಿತು.
ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ಬಿ.ಕೆ. ಲಕ್ಷ್ಮೀಜಿ ಪುಷ್ಪ ನಮನ ಸಲ್ಲಿಸಿ, ಸೀತಕ್ಕ ಅವರು ಇಳಿ ವಯಸ್ಸಿನಲ್ಲಿದ್ದರೂ ಸ್ವಲ್ಪ ಸಮಯವನ್ನೂ ವ್ಯರ್ಥ ಮಾಡದೆ ಈಶ್ವರನ ಸೇವೆಯಲ್ಲಿ ಹಗಲಿರುಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ಮೂಲಕ ಯುವ ಬ್ರಹ್ಮಾಕುಮಾರ ಬ್ರಹ್ಮಾಕುಮಾರಿಯರಿಗೆ ಪ್ರೇರಣೆಯಂತಿದ್ದರು ಎಂದು ತಿಳಿಸಿದರು.
ಯೋಗ ಭವನದ ನಾಗರಾಜ್, ಪ್ರಾಣೇಶ್, ಪ್ರಾಂಶುಪಾಲ ಬಿ.ಕೆ.ರಂಗನಾಥ, ಬಿ.ಕೆ. ಶಾರದಾಜಿ, ಬಿ.ಕೆ. ಲಲಿತಮಣಿಜೀ, ಅಮೃತ, ಮೋಹನ, ನಾಗಶ್ರೀ, ಪ್ರಭಾಮಣಿ, ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತೆ ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ, ರಮಾಜಿ, ಓಂ ಶಾಂತಿ ನ್ಯೂಸ್ ಸರ್ವಿಸ್‌ನ ಬಿ.ಕೆ. ಆರಾಧ್ಯ ಇತರರು ಇದ್ದರು.