ಕಡಿಮೆಯಾದ ಕುಮಾರಧಾರದಲ್ಲಿನ ಪ್ರವಾಹ.ಜಲಾವೃತವಾಗಿರುವ ದೇವರ ಜಳಕದ ಕಟ್ಟೆ 
ಜಿಲ್ಲೆ

ಕುಮಾರಧಾರಾದಲ್ಲಿ ಪ್ರವಾಹ ಇಳಿಮುಖ : ದರ್ಪಣತೀರ್ಥ ಸೇತುವೆ ಸಂಚಾರಕ್ಕೆ ತೆರವು

ಇಂದಿರಾ ಎನ್ ಕೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ವರುಣಾರ್ಭಟ ಕಡಿಮೆಯಾಗಿದೆ. ಇದರಿಂದಾಗಿ ಪ್ರವಾಹ ಸದೃಶವಾಗಿ ಹರಿಯುತ್ತಿದ್ದ ಕುಮಾರಧಾರಾದಲ್ಲಿ ನೀರು ಕಡಿಮೆಯಾಗುತ್ತಿದೆ. ದರ್ಪಣತೀರ್ಥ ಸೇತುವೆ ಸಂಚಾರಕ್ಕೆ ತೆರವುಗೊಂಡಿದೆ. ಗ್ರಾಮೀಣ ಭಾಗದಲ್ಲೂ ಮಳೆ ಕಡಿಮೆಯಾದ ಕಾರಣ ಈ ಭಾಗದ ನದಿ-ತೊರೆಗಳಲ್ಲಿ ಪ್ರವಾಹ ಕಡಿಮೆಯಾಗಿದೆ.

ಕುಮಾರಧಾರಾ ಸ್ನಾನಘಟ್ಟ ಶನಿವಾರವೂ ಮುಳುಗಡೆಯಾಗಿಯೇ ಇದೆ. ದೇವರ ಅವಭೃತ ಕಟ್ಟೆ, ಶೌಚಗೃಹ, ಡ್ರೆಸ್ಸಿಂಗ್ ಕೊಠಡಿಗಳು ಕೂಡಾ ಜಲಾವೃತ ಸ್ಥಿತಿಯಲ್ಲೇ ಇವೆ. ಗ್ರಾಮೀಣ ಪ್ರದೇಶಗಳಾದ ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ನಡುಗಲ್ಲು, ಗುತ್ತಿಗಾರು, ಪಂಜ, ಬಳ್ಪ, ಕೇನ್ಯ, ಬೀದಿಗುಡ್ಡೆ, ಯೇನೆಕಲ್ಲು, ಐನೆಕಿದು, ನಿಂತಿಕಲ್ಲು, ಕಲ್ಮಡ್ಕ, ಕರಿಕ್ಕಳ, ಅಲೆಕ್ಕಾಡಿ ಎಡಮಂಗಿಲ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಈ ಭಾಗದಲ್ಲಿ ಮುಳುಗಡೆಯಾಗಿದ್ದ ಸೇತುವೆಗಳು ಮತ್ತು ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದೆ.