ಜಿಲ್ಲೆ

ಭಾರಿ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ

ಕಲಬುರಗಿ: ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನದಿಂದ ಭಾನುವಾರ ನಸುಕಿನವರೆಗೂ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಜೋರಾದ ಮಳೆಯಾಗಿದೆ. ಆಳಂದ ತಾಲೂಕಿನ ತೀರ್ಥ ಗ್ರಾಮದಲ್ಲಿ ಭಾರಿ ಮಳೆಯಾಗಿದ್ದು, ಗ್ರಾಮದ ಬಳಿ ಹಳ್ಳದಲ್ಲಿ ಕಾಣಿಸಿಕೊಂಡ ಪ್ರವಾಹದಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.

ಆಳಂದ ತಾಲೂಕಿನ ತೀರ್ಥ ಗ್ರಾಮದಲಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಮಹಿಳೆ ಶ್ರೀದೇವಿ ನಿಂಗಣ್ಣ ಪೂಜಾರಿ (46) ಎಂದು ಗುರುತಿಸಲಾಗಿದೆ.

ಮಳೆಯಿಂದಾಗಿ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ, ರೈಲ್ವೆ ಕೆಳ ಸೇತುವೆ, ಇನ್ನಿತರ ಕಡೆಗೆ ರಸ್ತೆಯಲ್ಲಿ ನೀರು ನಿಂತುಕೊಂಡಿತ್ತು. ನಿನ್ನೆ ರಾತ್ರಿ ವಾಹನಗಳು ನೀರಿನಲ್ಲಿ ‌ನಿಂತುಕೊಂಡಿದ್ದವು.

ಇಂದು ಬೆಳಗ್ಗೆಯಿಂದ ಮಳೆ‌ ಬಿಡುವು ನೀಡಿದ್ದು. ಈಗ ಸಣ್ಣದಾಗಿ ಬಿಸಿಲು ಕಾಣಿಸಲು ಶುರುವಾಗಿದೆ.