ಜಿಲ್ಲೆ

ಮಹಾಮಳೆಗೆ ನಲುಗಿದ ಕಾರವಾರ

Uttara Kannada - Subash Hegde

ಕಾರವಾರ: ಮಹಾಮಳೆಗೆ ಕಾರವಾರ ನಲುಗಿದೆ. ಸೋಮವಾರದ ಬೆಳಗಿನ ವರದಿಯಂಯೆ ಹಿಂದಿ‌ನ 24 ಗಂಟೆಗಳ ಅವಧಿಯಲ್ಲಿ ಕಾರವಾರ ತಾಲೂಕಿನ ಕೆಲವೆಡೆ ರಾಜ್ಯದಲ್ಲಿಯೇ ಅತ್ಯಧಿಕ ಮಳೆಯಾಗಿದೆ. ಪರಿಣಾಮ ತಾಲೂಕಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಧರೆ ಕುಸಿದಿದೆ.
ಕಾರವಾರ ಚೆಂಡಿಯಾ ಗ್ರಾಮದ ಸುಮಾರು 100 ಮನೆಗಳಿಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೀರು ನಿಂತಿದೆ. ಈಡೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು 50 ಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಹಾನಿ ವರದಿ
ಜಿಲ್ಲೆಯ ಕುಮಟಾ ಹಾಗೂ ಭಟ್ಕಳದಲ್ಲಿ ತಲಾ 1 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 2 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 18 ಮನೆಗಳಿಗೆ ಅಲ್ಪ ಹಾನಿಯಾಗಿದೆ. ಹೊನ್ನಾವರದಲ್ಲಿ 35 ಹಾಗೂ ಕುಮಟಾದಲ್ಲಿ 5 ಜನರನ್ನು ರಕ್ಷಿಸಿ, ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ.

ಸೋಮವಾರದ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ವೈಲವಾಡ(175ಮಿಮೀ), ಕದ್ರಾ(154),ಕುಮಟಾದ ಹೆಗಡೆ(152),ಸಿದ್ದಾಪುರದ ನಿಲ್ಕುಂದ(149.5),ಕಾರವಾರದ ಮುಡಗೇರಿ(147),ಕುಮಟಾದ ಸೊಪ್ಪಿನ ಹೊಸಳ್ಳಿ(145.5), ಕಾರವಾರ ಅಸ್ನೋಟಿ(138.5), ಅಂಕೋಲಾದ ಅಗಸೂರಿನಲ್ಲಿ (133), ಕಾರವಾರದ ಕಡವಾಡದಲ್ಲಿ (132.5), ಮಾಜಾಳಿ(129.5ಮಿಮೀ) ಮಳೆಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಳೆ‌ ಬಿದ್ದಿರುವ ಗ್ರಾಮಗಳಾಗಿದೆ.