ಕುಷ್ಟಗಿಯ ವಿವಿಧೆಡೆ ಅನುಮತಿ ಇಲ್ಲದೆ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ಪುರಸಭೆ ಅಧಿಕಾರಿಗಳು ಗುರವಾರ ತೆರವುಗೊಳಿಸಿದರು. 
ಜಿಲ್ಲೆ

ಫ್ಲೆಕ್ಸ್ ತೆರವಿಗೆ ಮುಂದಾದ ಪುರಸಭೆ

Koppal

ಕುಷ್ಟಗಿ: ಅನುಮತಿ ಪಡೆಯದೆ ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ಪುರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು. ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ ಸೇರಿ ವಿವಿಧೆಡೆ ಹಾಕಲಾಗಿದ್ದ 30ಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಯಿತು. ಅನುಮತಿ ಪಡೆದು ಹಾಕಲಾಗಿದ್ದ ಬೆರಳೆಣಿಕೆಯಷ್ಟು ಬ್ಯಾನರ್‌ಗಳು ಮಾತ್ರ ಅಲ್ಲಲ್ಲಿ ಕಂಡುಬಂದವು.

ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಆದೇಶದ ಹಿನ್ನೆಲೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. 30ಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಅನುಮತಿ ಪಡೆದ ಕೆಲವುಗಳನ್ನು ಮಾತ್ರ ಕೈಬಿಡಲಾಗಿದೆ ಎಂದು ಪುರಸಭೆಯ ನೈರ್ಮಲ್ಯ ನಿರೀಕ್ಷಕ ಮಹೇಶ ಅಂಗಡಿ ತಿಳಿಸಿದರು.