ಹೊಳೆನರಸೀಪುರ : ಗಣರಾಜ್ಯೋತ್ಸವದ ಪ್ರಯುಕ್ತ ಸರ್ಕಾರಿ ಇಲಾಖೆ, ಶಾಲಾ, ಕಾಲೇಜುಗಳಲ್ಲಿ ದ್ವಜಾರೋಹಣ ನಡೆಸಿ ಸಂಜೆ ವೇಳೆಗೆ ಅದನ್ನು ಗೌರವದಿಂದ ಅವರೋಹಣ ಮಾಡುವುದು(ಇಳಿಸುವುದು) ನಿಯಮ. ಆದರೆ ಪಟ್ಟಣದ ಕವರ್ ಡೆಕ್ ಕಟ್ಟಡದ ಮೇಲೆ ಇರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಮಾತ್ರ ರಾಷ್ಟದ್ವಜವನ್ನು ಶುಕ್ರವಾರ ಸಂಜೆ ಸೂರ್ಯೋದಯದ ಮುನ್ನ ಇಳಿಸದೆ ನಿರ್ಲಕ್ಷೃ ವಹಿಸಿರುವ ಪ್ರಸಂಗ ನಡೆದಿದೆ.
ಗ್ರಂಥಾಲಯಲ್ಲಿಯೂ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿತ್ತು. ಆದರೆ ಗ್ರಂಥಾಲಯ ಸಿಬ್ಬಂದಿ ತನ್ನ ಕರ್ತವ್ಯ ಮರೆತ ಕಾರಣ ಶನಿವಾರ ಮಧ್ಯಾಹ್ನವಾದರೂ ರಾಷ್ಟದ್ವಜ ಹಾರಾಡುತ್ತಲೇ ಇತ್ತು. ತಾಲೂಕು ಆಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.