ಜಿಲ್ಲೆ

ಸೇನೇಶ್ವರ ದೇವಳದಲ್ಲಿ ಧ್ವಜಾರೋಹಣ

ಇಂದಿರಾ ಎನ್ ಕೆ

ಬೈಂದೂರು: ಮಹತೋಭಾರ ಶ್ರೀ ಸೇನೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ಮೇ.04ರ ತನಕ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ತಂತ್ರಿ ಕೃಷ್ಣ ಸೋಮಯಾಜಿ ನೇತೃತ್ವದಲ್ಲಿ ಧ್ವಜಾರೋಹಣ ಶನಿವಾರ ನೆರವೇರಿತು. ಬೆಳಗ್ಗೆ ಕಲಶ ಪ್ರತಿಷ್ಠಾಪನೆ, ಕಂಕಣ ಧಾರಣೆ ನಂತರ ರುಜ್ಜು ಬಂಧನ ಮುಂತಾದ ಧಾರ್ಮಿಕ ವಿಧಾನಗಳು ನಡೆಯಿತು.

ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಬಿಲ್ಲವ, ಮಾಜಿ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ, ಅರ್ಚಕ ವೃಂದ, ಸ್ಥಳೀಯ ಜನಪ್ರತಿನಿಧಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಜಾತ್ರೆಯ ಪ್ರಯುಕ್ತ ಪ್ರತಿದಿನ ಅಪ್ಪಿಕಟ್ಟೆ, ಬಿಯಾರಕಟ್ಟೆ, ಜಟ್ಕನಕಟ್ಟೆ, ನಾಕಟ್ಟೆ, ಪಡುವರಿಕಟ್ಟೆ, ಬಂಕೇಶ್ವರಕಟ್ಟೆ ಉತ್ಸವಗಳು ಜರುಗಲಿದ್ದು, ಮೇ 02ರಂದು ಶ್ರೀ ಸೇನೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಹಾಗೂ ಮೇ 03ರಂದು ಅವಭೃತ ಸ್ನಾನ, ಓಕುಳಿ ಮತ್ತು ನಗರೋತ್ಸವ ನಡೆಯಲಿದೆ.