ರಾಯಚೂರು: ಡಿಪ್ಲೋಮಾ ಪೂರ್ಣಗೊಳಿಸಿ ಇಂಜಿನಿಯರಿಂಗ್ ಪದವಿ ಪ್ರವೇಶಕ್ಕಾಗಿ ನಡೆಸಲಾಗುವ ಡಿಸಿಇಟಿ ಮತ್ತು ಪಿಜಿ ಸಿಇಟಿ ಪ್ರಕ್ರಿಯೆಯಲ್ಲಿರುವ ಲೋಪದೋಷ ಸರಿಪಡಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಒತ್ತಾಯಿಸಿದೆ.
ಪರಿಷತ್ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಬುಧವಾರ ಮನವಿ ಸಲ್ಲಿಸಿ, ಕರ್ನಾಟಕ ಪರೀಕ್ಷಾ ಪ್ರಾಕಾರ ಪ್ರವೇಶ ಪ್ರಕ್ರಿಯೆಯನ್ನು ಲೋಪದೋಷಗಳಿಲ್ಲದಂತೆ ಪಾರದರ್ಶಕವಾಗಿ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಕಾರ ಕಳೆದ ಎರಡು ವರ್ಷಗಳಿಂದ ಡಿಸಿಇಟಿ ಮತ್ತು ಪಿಜಿಸಿಇಟಿಯ ಎರಡನೇ ಸುತ್ತಿನ ಕಟ್‌ಆ್ ಅಂಕಪಟ್ಟಿ ಮತ್ತು ಉಳಿದಿರುವ ಸೀಟುಗಳ ವರದಿ ಪ್ರಕಟಿಸದೇ ಇರುವುದು ವಿದ್ಯಾರ್ಥಿಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಬಗ್ಗೆ ಸಂದೇಹ ಉಂಟು ಮಾಡಿದೆ.
ಮೊದಲನೇ ಸುತ್ತಿನಲ್ಲಿ ಪ್ರವೇಶಾತಿ ಸಿಗದ ವಿದ್ಯಾರ್ಥಿಗಳು ಎರಡನೇ ಸುತ್ತಿನಲ್ಲಿ ತಮ್ಮ ಆಯ್ಕೆಗಳನ್ನು ನೀಡುತ್ತಾರೆ. ಆದರೆ ಇಲ್ಲಿಯೂ ಪ್ರವೇಶಾತಿ ಸಿಗದೆ, ಮೂರನೇ ಸುತ್ತಿನಲ್ಲಿ ತಮಗೆ ಬೇಕಾದ ಕಾಲೇಜು ಆಯ್ಕೆ ಮಾಡಿಕೊಳ್ಳಲು ಎರಡನೇ ಸುತ್ತಿನ ಕಟ್‌ಆ್ ಪ್ರಮುಖವಾಗುತ್ತದೆ.
ಆದರೆ ಪ್ರಾಕಾರ ಸೀಟುಗಳ ಮಾಹಿತಿ ನೀಡದ ಕಾರಣ ಯಾವ ಸೀಟು ಖಾಲಿಯಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಯದಂತಾಗಿದೆ. ಕೂಡಲೇ ಲೋಪದೋಷ ಸರಿಪಡಿಸಿ, ಪಾರದರ್ಶಕವಾಗಿ ಪ್ರವೇಶ ಪ್ರಕ್ರಿಯೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಪರಿಷತ್ ನಗರ ಕಾರ್ಯದರ್ಶಿ ಭೀಮೇಶ ಸಾಗರ್, ಪದಾಕಾರಿಗಳಾದ ಪಾಂಡು ವೌರ್ಯ, ಬಸವಪ್ರಭು, ಪ್ರಮೀತ್, ಭಾಗ್ಯಲಕ್ಷ್ಮಿ, ಜಿ.ಲಕ್ಷ್ಮಿಕಾಂತ, ರಂಜೀತ್ ಇದ್ದರು.