ಇಂಡಿ: ಐದು ವರ್ಷದ ಸರಾಸರಿ ಇಳುವರಿಗಿಂತ ಪ್ರಸಕ್ತ ಸಾಲಿನ ಇಳುವರಿ ಕಡಿಮೆ ಇದ್ದರೆ ಮಾತ್ರ ಬೆಳೆ ವಿಮೆ ನೀಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಶಿರಶ್ಯಾಡ ಗ್ರಾಮದ ಸರಾಸರಿ ಇಳುವರಿ 343 ಕೆಜಿ ಇದೆ. ಈ ವರ್ಷದ ಇಳುವರಿ 110 ಕೆಜಿ ಇದೆ. ಹೀಗಾಗಿ ಶಿರಶ್ಯಾಡ ಗ್ರಾಮದವರಿಗೆ ಬೆಳೆ ವಿಮೆ ಲಭಿಸಲಿದೆ. ಹಿಂಗಣಿ, ಲಾಳಸಂಗಿ, ಅರ್ಜುಣಗಿ, ಆಳೂರ, ಮಸಳಿ ಬಿಕೆ, ಅಗರಖೇಡ, ಪಡನೂರ, ಗುಬ್ಬೆವಾಡ, ಕೋಳುರಗಿ, ತಾಂಬಾ, ಹೊರ್ತಿ, ಝಳಕಿ, ತೆನೆಹಳ್ಳಿ, ಕಪನಿಂಬರಗಿ ಗ್ರಾಮದ ರೈತರಿಗೂ ಬೆಳೆ ವಿಮೆ ಸಿಗಲಿದೆ.
ಲಚ್ಯಾಣ ಗ್ರಾಮದ ಐದು ವರ್ಷದ ಸರಾಸರಿ ಇಳುವರಿ 421 ಕೆಜಿ ಇದೆ. ಪ್ರಸಕ್ತ ವರ್ಷದ 422 ಕೆಜಿ ಇಳುವರಿ ಬಂದಿದೆ. ಹೀಗಾಗಿ ಲಚ್ಯಾಣ ಗ್ರಾಮದ ರೈತರಿಗೆ ವಿಮೆ ಬರುವುದಿಲ್ಲ ಎಂದರು.
ಅದರಂತೆ ಅಹಿರಸಂಗ, ಇಂಗಳಗಿ, ಹಿರೇಬೇವನೂರ, ಸಂಗೋಗಿ, ಬೆನಕನಹಳ್ಳಿ, ಬಬಲಾದ, ಭತಗುಣಕಿ, ಬಳ್ಳೊಳ್ಳಿ, ಹಂಜಗಿ, ಮಿರಗಿ, ಬಸನಾಳ, ಚಿಕ್ಕಬೇವನೂರ, ಸಾಲೋಟಗಿ, ಅಥರ್ಗಾ, ಇಂಡಿ ಗ್ರಾಮೀಣ ಚವಡಿಹಾಳ, ನಾದ ಕೆಡಿ ಹಡಲಸಂಗ ರೂಗಿ, ನಿಂಬಾಳ ಕೆಡಿ, ಅಂಜುಟಗಿ, ಖೇಡಗಿ ಗ್ರಾಮದ ರೈತರಿಗೆ ಬೆಳೆ ವಿಮೆ ಬರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.