ಸಿಂದಗಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ವಿಠ್ಠಲ ಕೊಳ್ಳೂರ ಮಾತನಾಡಿದರು. ಶರಣಪ್ಪ ಸುಣಗಾರ, ಅಶೋಕ ಮನಗೂಳಿ, ಅಯ್ಯುಬ್ ದೇವರಮನಿ, ಮುಸ್ತಾಕ್ ಮುಲ್ಲಾ, ಶಿವನಗೌಡ ಬಿರಾದಾರ ಇತರರಿದ್ದರು. 
ಜಿಲ್ಲೆ

ಭಾರತ ಜೋಡೋ ಪಾದಯಾತ್ರೆಗೆ ಐದು ಸಾವಿರ ಕಾರ್ಯಕರ್ತರು ಭಾಗಿ

ಸಿಂದಗಿ: ರಾಹುಲ್ ಗಾಂಧಿ ಅವರ ಭಾರತ ಜೋಡೋ ಪಾದಯಾತ್ರೆಯಲ್ಲಿ ಸಿಂದಗಿ ಮತ ಕ್ಷೇತ್ರದಿಂದ 5 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳ್ಳೂರ ಹೇಳಿದರು.

ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಅ.30ರವರೆಗೆ ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ ಅ.21ರಂದು ರಾಯಚೂರಿಗೆ ಬರಲಿದೆ. ಈ ಪಾದಯಾತ್ರೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಸೇರಿದಂತೆ 5 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಮಾಜಿ ಶಾಸಕ ಶರಣಪ್ಪ ಸುಣಗಾರ, ಮುಖಂಡರಾದ ಅಶೋಕ ಮನಗೂಳಿ, ಅಯ್ಯುಬ್ ದೇವರಮನಿ, ಮುಸ್ತಾಕ್ ಮುಲ್ಲಾ, ಶಿವನಗೌಡ ಬಿರಾದಾರ, ಯೋಗಪ್ಪಗೌಡ ಪಾಟೀಲ, ಸಿದ್ದಣ್ಣ ಹಿರೇಕುರುಬರ, ರವಿ ದೇವರಮನಿ, ರಾಜಶೇಖರ ಕೂಚಬಾಳ, ಇರ್ಫಾನ್ ಆಳಂದ, ಯಲ್ಲು ಕೆರಕಿ, ಮಾಂತು ಅಮ್ಮಾಗೋಳ, ಶರಣಗೌಡ ಪಾಟೀಲ, ಶಿವು ಕೊಟ್ಟರಗಸ್ತಿ ಇತರರಿದ್ದರು.